ಕಾಪು:ಕಾಪು ಫ್ರೆಂಡ್ಸ್ ಕ್ರಿಕೆಟರ್ಸ್,ಕಾಪು ಇವರ ವತಿಯಿಂದ ಜಿತೇಂದ್ರ ಜೆ ಶೆಟ್ಟಿ ಪಡುಬಿದ್ರಿ ಅವರ ಅಧ್ಯಕ್ಷತೆಯಲ್ಲಿ ಅನಿತ ಶೆಟ್ಟಿ ಕಾಪು ಇವರ ಮುಂದಾಳತ್ವದಲ್ಲಿ 5 ನೆ ಬಾರಿಗೆ ಅಂತರ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಈ ವರ್ಷ ಕಟಪಾಡಿ ಪಳ್ಳಿ ಗುಡ್ಡೆ ಮೈದಾನದಲ್ಲಿ ಹಗಲು ರಾತ್ರಿ ಕ್ರಿಕೆಟ್ ಕೂಟವಾಗಿ ನಡೆಯಲಿದ್ದು, ಈ ಪಂದ್ಯ ಕೂಟದಲ್ಲಿ ಕರ್ನಾಟಕದ ಪ್ರತಿಷ್ಠಿತ 8ತಂಡಗಳು ಹಾಗೂ ಸ್ಥಳೀಯವಾಗಿ 12ತಂಡಗಳು ಸೆಣಸಾಟ ನಡೆಸಲಿದೆ. ಈ ಟೂರ್ನಮೆಂಟ್ ಒಶಿಯನ್ ಟ್ರೋಫಿ 2025 ಎನ್ನುವ ಹೆಸರಿನಲ್ಲಿ ನವೆಂಬರ್ ತಿಂಗಳ 7/8/9 ನೇ ದಿನಾಂಕದಂದು ನಡೆಯಲಿದೆ.
ಪ್ರಥಮ ಸ್ಥಾನ ವಿಜೇತ ತಂಡವೂ ರೂ 4,04,444 ಹಾಗೂ ಆಕರ್ಷಕ ಮಿನುಗುವ ಟ್ರೋಫಿ,ದ್ವಿತೀಯ ಸ್ಥಾನ ವಿಜೇತ ತಂಡವೂ 2,02,222 ಹಾಗೂ ಆಕರ್ಷಕ ಮಿನುಗುವ ಟ್ರೋಫಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ,43 ಇಂಚಿನ ಗೂಗಲ್ ಟಿವಿ ಅಲ್ಲದೆ ಹಲವಾರು ವೈಯಕ್ತಿಕ ಪ್ರಶಸ್ತಿ ಗಳು ಇರುತ್ತದೆ. ಟೂರ್ನಮೆಂಟ್ ನೇರ ಪ್ರಸಾರ ವನ್ನು M9 ಸ್ಪೋರ್ಟ್ಸ್ ಮಾಡಲಿದೆ. ಈ ಕ್ರಿಕೆಟ್ ಪಂದ್ಯಾಕೂಟವು ಈ ಕ್ರೀಡಾ ಋತುವಿನಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಕೂಟವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.












