ಹೆಮ್ಮಾಡಿಯ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ: ಮಹಾಸಭೆ

ಕುಂದಾಪುರ: ಹೆಮ್ಮಾಡಿಯ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ ಇದರ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಾಧು ಎಸ್. ಬಿಲ್ಲವ ಮಾತನಾಡಿ, ಸಂಘವು ಸಾಲ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ಸುಸ್ತಿ ಸಾಲಗಳ ಪ್ರಮಾಣವನ್ನು ಕಡಿಮೆ ಮಾಡಲು, ಸಂಘದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದರ ಮೂಲಕ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದರೊಂದಿಗೆ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೂ ಮಂಡಳಿ ತೀರ್ಮಾನಿಸಿದೆ. 2024-25ನೇ ಸಾಲಿನಲ್ಲಿ 17.25 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು. ಇದೇ ವೇಳೆ ಪಿಯುಸಿಯಲ್ಲಿ 5ನೇ ರಾಂಕ್ ಪಡೆದು ಹೆಮ್ಮಾಡಿಯ ಕೀರ್ತಿಯನ್ನು ಹೆಚ್ಚಿಸಿದ ಕು.ಸಿಂಚನಾ ಸಿ ಪೂಜಾರಿ ಹೆಮ್ಮಾಡಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಯಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು.

ಸಂಘದ ಉಪಾಧ್ಯಕ್ಷೆ ಕುಸುಮಾ ಆ‌ರ್. ಮೊಗವೀರ, ನಿರ್ದೇಶಕರಾದ ಜೀತಾ ಕ್ರಾಸ್ತಾ, ಪದ್ಮಾವತಿ ಶೆಟ್ಟಿ, ಶೋಭಾ ಜಿ. ಪುತ್ರನ್, ಗುಣರತ್ನ ಆರ್, ಜಯಲಕ್ಷ್ಮೀ ಎಸ್. ರಾವ್, ಆಸಿಯಾ ಭಾನು, ಭಾರತಿ, ಶಾರದಾ, ನೇತ್ರಾವತಿ, ಲೀಲಾವತಿ ಗಾಣಿಗ, ಪ್ರತಿಮಾ ವರ್ಗೀಸ್, ಗೀತಾ ಎಚ್.ಡಿ. ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕುಲಾಲ್ ಹೆಮ್ಮಾಡಿ ವರದಿ ವಾಚಿಸಿದರು. ಪ್ರಾರ್ಥನೆ ಶ್ರೀಮತಿ ಲಲಿತಾ ಟೀಚರ್, ಶ್ರೀದೇವಿ ಸ್ವಾಗತಿಸಿ, ಅಭಿಜಿತ್ ವಂದಿಸಿದರು. ಶಿವರಾಮ್ ನಿರೂಪಿಸಿದರು.