ಅಮೆರಿಕದ ಡಲ್ಲಾಸ್ನಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರು ಕರ್ನಾಟಕದವರು ಎನ್ನಲಾಗಿದೆ.
ಈ ಘಟನೆ ಸೆಪ್ಟೆಂಬರ್ 10 ರಂದು ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಡೌನ್ಟೌನ್ ಸೂಟ್ಸ್ ಮೋಟೆಲ್ನಲ್ಲಿ ನಡೆದಿದೆ. ಭಾರತ ಮೂಲದ 50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಎದುರೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ. ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಅವರನ್ನು ಕೊಲೆ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದ್ದು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜೈಲು ದಾಖಲೆಗಳ ಪ್ರಕಾರ, ಆರೋಪಿಗೆ ಬಾಂಡ್ ರಹಿತ ಬಂಧನ ಆದೇಶ ಹೊರಡಿಸಲಾಗಿದೆ.
ನಾಗಮಲ್ಲಯ್ಯ, ತನ್ನ ಸಹೋದ್ಯೋಗಿ ಯೋರ್ದಾನಿಸ್ ಕೋಬೋಸ್-ಮಾರ್ಟಿನೆಜ್ ಜೊತೆ ಒಡೆದ ವಾಷಿಂಗ್ ಮೆಷಿನ್ ಬಗ್ಗೆ ನಡೆದ ವಾಗ್ವಾದದ ನಂತರ ಹತ್ಯೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕೋಬೋಸ್-ಮಾರ್ಟಿನೆಜ್ ಚಾಕುವನ್ನು ಹೊರತೆಗೆದು ನಾಗಮಲ್ಲಯ್ಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.












