ಕಾರ್ಕಳ: ಸೆ.13 ರಂದು ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ.

ಉಡುಪಿ: ಕಾರ್ಕಳ ಖಾಸಗಿ ಬಸ್ ನಿಲ್ದಾಣದ ಸಮೀಪ ಮಣ್ಣ ಗೋಪುರದ ಎದುರಿನ ಸವರಿನ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಸ್ವಸ್ತಿಕ್ ಹಿಯರಿಂಗ್ ಏಯ್ಡ್ ಕ್ಲಿನಿಕ್‌ನಲ್ಲಿ ಸೆ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಉಚಿತ ಸಂದರ್ಶನ ಹಾಗೂ ಉಚಿತ ಶ್ರವಣ ಶಕ್ತಿ ತಪಾಸಣೆ ಹಾಗೂ ಉಚಿತ ಸಲಹೆ ನೀಡಲಾಗುವುದು.

ಇಲ್ಲಿ ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳು ಲಭ್ಯವಿದೆ. ಈ ಶ್ರವಣ ಸಾಧನಗಳಲ್ಲಿ ಕ್ಲಿಯರ್ ಕೇಳಿಸುವ ತಂತ್ರಜ್ಞಾನವಿದ್ದು, 2ವರ್ಷ ಬ್ರ್ಯಾಂಡ್ ವಾರಂಟಿ ಇರುತ್ತದೆ. ಹಳೆಯ ಶ್ರವಣ ಸಾಧನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಬದಲಿಸಿ ಕೊಳ್ಳಬಹುದು. ಇಲ್ಲಿ ಶ್ರವಣ ಸಾಧನಗಳ ಬಿಡಿ ಭಾಗಗಳು, ಬ್ಯಾಟರಿ ಸೆಲ್‌ಗಳು, ಟ್ಯೂನಿಂಗ್ ಪ್ರೋಗ್ರಾಮಿಂಗ್, ಸರ್ವಿಸಿಂಗ್ ಹಾಗೂ ಟ್ರಯಲ್ ಡೆಮೋ ಲಭ್ಯವಿದೆ. ಇದಲ್ಲದೇ ಬ್ಯಾಟರಿ ರಹಿತ ಉನ್ನತ ಶ್ರೇಣಿಯ ರಿಚಾರ್ಜೆಬಲ್ ಶ್ರವಣ ಸಾಧನಗಳು ಸಿಗುತ್ತದೆ. ಈ ಶ್ರವಣ ಸಾಧನ ಕೇಂದ್ರವು ಉಡುಪಿಯಲ್ಲಿ ಹೆಸರುವಾಸಿಯಾಗಿರುವ ಸ್ವಸ್ತಿಕ್ ಶ್ರವಣ ಸಾಧನ ಕೇಂದ್ರದ ಶಾಖೆಯಾಗಿರುತ್ತದೆ. ಆಸಕ್ತರು ಮುಂಚಿತವಾಗಿ ಅಪಾಂಟ್ ಮೆಂಟ್ ಪಡೆದು ಬರಬಹುದು. ಹೆಚ್ಚಿನ ಮಾಹಿತಿಗಾಗಿ swastik hearing aid centre karkala ಗೂಗಲ್ ಪೇಜ್ ನಲ್ಲಿ ಸಂದರ್ಶಿಸಬಹುದು.