ಅಡುಗೆಗೆ ಯಾವ ಎಣ್ಣೆ ಬೆಸ್ಟ್, ಯಾವ ಎಣ್ಣೆಗೆ ಯಾವ ಗುಣ? ಅಡುಗೆ ಎಣ್ಣೆಯ ಈ ಸಂಗತಿಗಳನ್ನು ನೀವು ತಿಳಿದುಕೊಂಡಿರಲೇಬೇಕು!

2024ರಲ್ಲಿ ICMR ಮತ್ತು NIN ಹೊಸ ಡಯಟ್ ಗೈಡ್‌ಲೈನ್ಸ್ ಕೊಟ್ಟಿದ್ದಾರೆ. ಅದರಲ್ಲಿ “ಒಂದೇ ಎಣ್ಣೆಯನ್ನು ಬಳಸುವ ಬದಲು, ಬೇರೆ ಬೇರೆ ಎಣ್ಣೆಗಳನ್ನು ಮಿಕ್ಸ್ ಮಾಡಿ ಬಳಸಿ” ಎನ್ನುವ ಸಲಹೆ ನೀಡಲಾಗಿದೆ. ಯಾಕಂದ್ರೆ, ಒಂದೊಂದು ಎಣ್ಣೆಯಲ್ಲೂ ಒಂದೊಂದು ತರಹದ ಫ್ಯಾಟ್ ಇರುತ್ತೆ. ಎಲ್ಲವನ್ನೂ ಬಳಸಿದಾಗ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಸಿಗುತ್ತೆ.ಇಲ್ಲಿ ಅಡುಗೆ ಎಣ್ಣೆ ಮತ್ತು ಅವುಗಳ ಉಪಯೋಗಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದೇವೆ.

ಆಲಿವ್ ಎಣ್ಣೆ: ಯಾವುದಕ್ಕೆ ಸೂಕ್ತ?

ಆಲಿವ್ ಎಣ್ಣೆ ಬಳಕೆ ನಮ್ಮಲ್ಲಿ ತುಂಬಾ ಮಂದಿ ಮಾಡುತ್ತಾರೆ. ಈ ಎಣ್ಣೆ ಹೃದಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೋಅನ್‌ಸ್ಯಾಚುರೇಟೆಡ್ ಫ್ಯಾಟ್ ಮತ್ತು ಆ್ಯಂಟಿಆಕ್ಸಿಡೆಂಟ್ಸ್ ಜಾಸ್ತಿ ಇದೆ. ಖಾದ್ಯಗಳಲ್ಲಿ ಸಲಾಡ್‌ಗೆ, ತರಕಾರಿ ಸೌತೆ ಮಾಡೋಕೆ, ಲೈಟ್ ಆಗಿ ಫ್ರೈ ಮಾಡೋಕೆ ಇದು ಬೆಸ್ಟ್.

ಆದರೆ ಹೆಚ್ಚು ಬಿಸಿ ಮಾಡೋಕೆ, ಡೀಪ್ ಫ್ರೈ ಮಾಡೋಕೆ ಇದು ಅಷ್ಟು ಸೂಕ್ತವಲ್ಲ, ಯಾಕಂದ್ರೆ ಇದರ ಸ್ಮೋಕ್ ಪಾಯಿಂಟ್ ಕಡಿಮೆ.ಇದನ್ನು ಹೊರತುಪಡಿಸಿ ಬೇರೆಲ್ಲಾ ಆಹಾರಗಳ ತಯಾರಿಕೆಯಲ್ಲಿ ಇದನ್ನು ಬಳಸಬಹುದು.

ಸನ್ಫ್ಲವರ್ ಎಣ್ಣೆ ಒಳ್ಳೆಯದಾ?

ಸನ್ ಫ್ಲವರ್ ಎಣ್ಣೆಯ ಬಳಕೆ ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ಇದು ಕಡಿಮೆ ಬೆಲೆಗೂ ಸಿಗುತ್ತದೆ ಎನ್ನುವ ಕಾರಣಕ್ಕೆ ತುಂಬಾ ಮಂದಿ ಇದನ್ನು ಅಡುಗೆಗೆ ಬಳಸುತ್ತಾರೆ. ಈ ಎಣ್ಣೆಯ ರುಚಿ ನ್ಯೂಟ್ರಲ್ ಆಗಿರೋದ್ರಿಂದ ಹೆಚ್ಚು ಜನ ಇದನ್ನ ಬಳಸುತ್ತಾರೆ. ಡೀಪ್ ಫ್ರೈ ಮಾಡೋಕೂ ಇದು ಬೆಸ್ಟ್.ಈ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್ ಇರುತ್ತೆ. ಆದರೆ ಇದರಲ್ಲಿ ಒಮೆಗಾ-6 ಜಾಸ್ತಿ ಇರುತ್ತೆ. ಹಾಗಾಗಿ ಇದನ್ನ ಒಂದೇ ಬಳಸೋ ಬದಲು, ಸಾಸಿವೆ ಎಣ್ಣೆ ಅಥವಾ ನೆಲಗಡಲೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಬಳಸೋದು ಉತ್ತಮ.ಆದರೆ ಇದನ್ನು ಜಾಸ್ತಿ ಬಳಸೋದು ಒಳ್ಳೆಯದಲ್ಲ.

ಸಾಸಿವೆ ಎಣ್ಣೆ:

ಸಾಸಿವೆ ಎಣ್ಣೆಯ ಬಳಕೆ  ಉತ್ತರ ಭಾರತ ಮತ್ತು ಪೂರ್ವ ಭಾರತದಲ್ಲಿ ಜಾಸ್ತಿ ಇದೆ.ಈ ಎಣ್ಣೆಗೆ ಒಂದು ಕಟುವಾದ ರುಚಿ ಇರುತ್ತೆ. ಈ ಎಣ್ಣೆಯನ್ನು ನಿಯಮಿತವಾಗಿ ಅಡುಗೆಗೆ ಬಳಸಿದರೆ ಹೃದಯಕ್ಕೆ ತುಂಬಾ ಒಳ್ಳೆಯದು, ಯಾಕಂದ್ರೆ ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಅಂಶ ಕೂಡ ಇರುತ್ತೆ.ಆದರೆ ತುಂಬಾ ಮಂದಿಗೆ ಇದರ ಪರಿಮಳ ಹಿಡಿಸಲ್ಲ.ಈ ಎಣ್ಣೆಯನ್ನು ಪಲ್ಯ, ಸಾಂಬಾರ್, ಉಪ್ಪಿನಕಾಯಿ ಮಾಡೋಕೆ ಬಳಸಿದರೆ ಒಳ್ಳೆಯದು.

ತೆಂಗಿನೆಣ್ಣೆ : ದಕ್ಷಿಣ ಭಾರತದಲ್ಲಿ ತೆಂಗಿನ ಎಣ್ಣೆ ಹಾಕಿ ಮಾಡಿದ ಗರಿಗರಿ ತಿಂಡಿಗಳು,ಸಿಹಿತಿಂಡಿಗಳು ಫೇಮಸ್ಸು. ಆದರೆ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಜಾಸ್ತಿ ಇರೋದ್ರಿಂದ, ಹೆಚ್ಚು ಬಳಸಿದ್ರೆ ಕೊಲೆಸ್ಟ್ರಾಲ್ ಜಾಸ್ತಿ ಆಗಬಹುದು. ಆದರೆ ಇದರಿಂದ ಮಾಡಿದ ಖಾದ್ಯ ರುಚಿಯಾಗಿರುತ್ತೆ. ಗಾಣದ ಎಣ್ಣೆಯನ್ನು ಬಳಸೋದ್ರಿಂದ, ಶುದ್ಧ ತೆಂಗಿನಎಣ್ಣೆಯ ಬಳಕೆ. ಮೇಲೆ ನೀಡಿದ ಎಲ್ಲಾ ಎಣ್ಣೆಗಳಿಗಿಂತಲೂ ಉತ್ತಮ.

ತುಪ್ಪ : ಅಡುಗೆಗೆ ವಿಶೇಷ ರುಚಿ ಕೊಡುಲ್ಲಿ ತುಪ್ಪದ ಪಾತ್ರ ಪ್ರಮುವಾಗಿದೆ. ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಇರುತ್ತೆ ಮತ್ತು ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತೆ.ತೂಕ ಹೆಚ್ಚಲು ಕೂಡ ತುಪ್ಪ ಒಳ್ಳೆಯದು. ತುಪ್ಪದಲ್ಲ ಸ್ಯಾಚುರೇಟೆಡ್ ಫ್ಯಾಟ್ ಜಾಸ್ತಿ ಇರೋದ್ರಿಂದ, ಹೆಚ್ಚು ಬಳಸಬಾರದು. ಮಕ್ಕಳಿಗೆ ಮತ್ತು ಹೆಚ್ಚು ಓಡಾಡುವವರಿಗೆ ಇದು ಒಳ್ಳೆಯದು, ನಿಯಮಿತವಾಗಿ ಬಳಸಬಹುದು. ಒಬ್ಬ ವಯಸ್ಕರು ದಿನಕ್ಕೆ 25 ರಿಂದ 40 ಗ್ರಾಂ ಎಣ್ಣೆ ಮಾತ್ರ ಬಳಸಬೇಕು ಎನ್ನುತ್ತದೆ ವೈಜ್ಞಾನಿಕ ವರದಿ.