ಉಡುಪಿ: ಉದ್ಯಮಿ, ಕ್ರಿಕೆಟ್ ಪಟು ಅಂಬಲಪಾಡಿ ಕಿದಿಯೂರಿನ ಪ್ರದೀಪ್(52) ಸೆ.8ರಂದು ರಾತ್ರಿ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಪ್ರದೀಪ್ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒಡೆತನದ ಮಲ್ಪೆಯ ಪೆಟ್ರೋಲ್ ಪಂಪ್ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.
ಉತ್ತಮ ಕ್ರಿಕೆಟ್ ಪಟು ಆಗಿದ್ದರು. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಇವರು, ಉತ್ತಮ ಜಿಮ್ಪಟು ಆಗಿದ್ದರು.












