ಮಹಾರಾಷ್ಟ್ರ: ಗಣೇಶ ಮೂರ್ತಿ ಕೈಯಲ್ಲಿದ್ದ ಮೋದಕ 1.58 ಲಕ್ಷ ರೂ.ಗೆ ಹರಾಜು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್​ನಾಥ್​ದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ಕೈಯಲ್ಲಿದ್ದ ಮೋದಕ(ಸಿಹಿ ಕಡುಬು)1.85 ಲಕ್ಷ ರೂ.ಗೆ ಸೋಮವಾರ ಹರಾಜಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಹೌದು, ಇಲ್ಲಿನ ಶ್ರೀ ಖತುಶ್ಯಾಮ್​ ಗಣಪತಿ ಮಂಡಳಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಮೋದಕ ಹರಾಜಾಗಿದೆ. ಆದರೆ, ಬರೊಬ್ಬರಿ 1.85 ಲಕ್ಷ ರೂ.ಗೆ ಹರಾಜಾಗಿರೋದು ಎಲ್ಲರ ಕಣ್ಣು ಹುಬ್ಬೆರುವಂತೆ ಮಾಡಿದೆ.10 ದಿನಗಳ ಉತ್ಸವದ ಕೊನೆಯ ದಿನದಂದು ಮೋದಕವನ್ನು ವಿಗ್ರಹದ ಕೈಯಲ್ಲಿ ಇರಿಸಿದ ನಂತರ ಹರಾಜು ಮಾಡುವುದು ಕಳೆದ 11 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದರಲ್ಲಿ ಭಾಗವಹಿಸುವವರು ಮೋದಕವು ತಮ್ಮ ಜೀವನದಲ್ಲಿ ತಂದಿರುವ ಅದೃಷ್ಟ ಮತ್ತು ಅದೃಷ್ಟವನ್ನು ದೃಢೀಕರಿಸುತ್ತಾರೆ ಎಂದು ಮಂಡಲದ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಬೆ ತಿಳಿಸಿದರು.

ಮೋದಕವನ್ನು ವಿಶೇಷವಾಗಿ ಹರಾಜಿಗಾಗಿಯೇ ತಯಾರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ 2.25-3.25 ಕೆಜಿ ತೂಕವಿರುತ್ತದೆ, ಹೆಚ್ಚಿನ ಪ್ರಮಾಣದಲ್ಲಿ ಡ್ರೈಪ್ರೂಟ್ಸ್​ ಇರುತ್ತವೆ. ಈ ವರ್ಷದ 1.85 ಲಕ್ಷ ರೂ.ಗಳ ವಿಜೇತ ಬಿಡ್ ಅನ್ನು ಅನಾಮಿಕಾ ತ್ರಿಪಾಠಿ ಎಂಬುವರ ಪಾಲಾಗಿದೆ ಎಂದು ಚೌಬೆ ಹೇಳಿದರು.