ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಎಂಬ ಗ್ರಾಮದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪದವಿಪೂರ್ವ ತರಗತಿಯವರೆಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದ 1943ನೇ ಇಸವಿಯಿಂದಲೇ ಶ್ರೀ ಸೋಧೆ ವಾದಿರಾಜ ಮಠದಿಂದ ಪ್ರವರ್ತಿತವಾದ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬೆಂಗಳೂರಿನ ಪ್ರಖ್ಯಾತ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್” ಸಾಮಾಜಿಕ ಕಳಕಳಿಯಿಂದ ತನ್ನ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟೀಸ್(CSR) ನಿಧಿಯಿಂದ ಸುಮಾರು 48ಲಕ್ಷ ರೂಪಾಯಿಗೂ ಮಿಕ್ಕಿ ವೆಚ್ಚ ಮಾಡಿ ಎರಡು ನೂತನ ಬಸ್ಸನ್ನು ವಿದ್ಯಾಸಂಸ್ಥೆಗೆ ಕೊಡುಗೆಯಾಗಿ ಒದಗಿಸಿದೆ ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ತಿಳಿಸಿದರು.

ಅವರು ಇನ್ನಂಜೆಯ ಎಸ್ ವಿ ಎಚ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಸೆ.8ರಂದು ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅತ್ಯುತ್ತಮ ಬಸ್ ಸೇವೆ:
ವಿದ್ಯಾ ಸಂಸ್ಥೆಯು ಪ್ರಾರಂಭದ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಆಸುಪಾಸಿನ ಕರ್ನಾಟಕ ಹಾಗೂ ಕೇರಳ ರಾಜ್ಯದ ವಿದ್ಯಾರ್ಥಿಗಳಿಗೆ ಸನಿವಾಸ ಶಿಕ್ಷಣ ಒದಗಿಸುತ್ತಿತ್ತು. ಸುಮಾರು 700 ವಿದ್ಯಾರ್ಥಿಗಳು ನರ್ಸರಿಯಿಂದ 12ನೇ ತರಗತಿಯವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು ಬಹತೇಕ ವಿದ್ಯಾರ್ಥಿಗಳು ಮಧ್ಯಮ ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ. ಪ್ರಸಕ್ತ ವಿದ್ಯಾಸಂಸ್ಥೆಯಲ್ಲಿ ಎಂಟು ಬಸ್‌ಗಳು ಲಭ್ಯವಿದ್ದು ಇನ್ನೂ ಹೆಚ್ಚಿನ ಬಸ್‌ಗಳ ಅಗತ್ಯವಿದೆ ಎಂದವರು ಹೇಳಿದರು.
ಇದೀಗ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪ್ರಖ್ಯಾತ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್” ಸಾಮಾಜಿಕ ಕಳಕಳಿಯಿಂದ ತನ್ನ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟೀಸ್(CSR) ನಿಧಿಯಿಂದ ಸುಮಾರು 48ಲಕ್ಷ ರೂಪಾಯಿಗೂ ಮಿಕ್ಕಿ ವೆಚ್ಚ ಮಾಡಿ ಎರಡು ನೂತನ ಬಸ್ಸನ್ನು ವಿದ್ಯಾಸಂಸ್ಥೆಗೆ ಕೊಡುಗೆಯಾಗಿ ಒದಗಿಸಿದ್ದು ಶ್ಲಾಘನೀಯ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರತ್ನಕುಮಾರ್,ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್,ಗವರ್ನಿಂಗ್ ಕೌನ್ಸಿಲ್ ನ ಹರೀಶ್ ಬೆಳ್ಮಣ್ ಮತ್ತು ಡೀನ್‌ಗಳು ಉಪಸ್ಥಿತರಿದ್ದರು.
















