ಮಣಿಪಾಲ: ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ಸೆ. 8 ರಿಂದ 13ರವರೆಗೆ ಬೆಳಗ್ಗೆ 9ರಿಂದ ಅಪರಾಹ್ನ 4 ಗಂಟೆಯವರೆಗೆ ಸ್ತ್ರೀಯರಲ್ಲಿ ಕಾಡುವ ಮುಟ್ಟಿನ ಸಮಸ್ಯೆಗಳು, ಪಿಸಿಒಡಿ, ಬಂಜೆತನ, ಗುಪ್ತಾಂಗದಲ್ಲಿ ಸೋಂಕು, ಋತುಬಂಧ, ಬಾಣಂತಿಯ ಸಮಸ್ಯೆಗಳಿಗೆ ಹಾಗೂ ಇನ್ನಿತ್ತರ ಕಾಯಿಲೆಗಳಿಗೆ ಉಚಿತ ತಪಾಸಣೆ, ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಮುನಿಯಾಲು ಆಯುರ್ವೇದ ಆಸ್ಪತ್ರೆ ಮತ್ತು ಅಜ್ಜರಕಾಡಿನ ಪಾರ್ಕ್ ರೆಸಿಡೆನ್ಸಿಯಲ್ಲಿರುವ ಮುನಿಯಾಲ್ ಫ್ಯಾಮಿಲಿ ಕ್ಲಿನಿಕ್ ನಲ್ಲಿ ನಡೆಯಲಿದೆ. ಮಾಹಿತಿಗಾಗಿ 81234 03233 ಸಂಪರ್ಕಿಸಲು ಸಂಸ್ಥೆಯ ಪ್ರಕಟನೆ ತಿಳಿಸಿದೆ.












