ಪೋಸ್ಟ್ ಆಫೀಸ್ ನಲ್ಲಿರುವ ಕೆಲವೊಂದು ಯೋಜನೆಗಳು ಬ್ಯಾಂಕ್ ನಲ್ಲಿ ಸಿಗುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. ಕಡಿಮೆ ಹೂಡಿಕೆಯಲ್ಲಿ ಪಿಪಿಎಫ್ ಯೋಜನೆ 2025: ಆಕರ್ಷಕ ಬಡ್ಡಿದರವನ್ನು ನೀಡುತ್ತವೆ. ಸಣ್ಣ ಹೂಡಿಕೆದಾರರಿಗೆ, ಮಧ್ಯಮ ವರ್ಗದವರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ವಿಶ್ವಾಸಾರ್ಹ ಆಯ್ಕೆಯಾಗಿವೆ. ಹಾಗಾದ್ರೆ ನೋಡೋಣ ಬನ್ನಿ ಬಡ್ಡಿ ದರ ಮತ್ತು ಯೋಜನೆಯ ವಿವರಗಳನ್ನು.
ಅಂಚೆಇಲಾಖೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಅತ್ಯಂತ ಜನಪ್ರಿಯವಾಗಿದೆ, ಇದು ಕಡಿಮೆ ಅಪಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹೊಂದಿದೆ
ಬಡ್ಡಿದರ ಎಷ್ಟಿದೆ: ಪ್ರಸ್ತುತ 7.1% ತೆರಿಗೆ-ಮುಕ್ತ ವಾರ್ಷಿಕ ಬಡ್ಡಿ.
ತೆರಿಗೆ ಪ್ರಯೋಜನ ಏನು?: EEE (ವಿನಾಯಿತಿ-ವಿನಾಯಿತಿ-ವಿನಾಯಿತಿ) ಸೌಲಭ್ಯ – ಹೂಡಿಕೆ, ಬಡ್ಡಿ ಮತ್ತು ಮುಕ್ತಾಯದ ಮೊತ್ತ ತೆರಿಗೆ-ಮುಕ್ತ.
ಕನಿಷ್ಠ ಹೂಡಿಕೆ ಎಷ್ಟು?: ಕೇವಲ 500 ರೂ.ಗಳಿಂದ ಖಾತೆ ತೆರೆಯಬಹುದು; ಗರಿಷ್ಠ ವಾರ್ಷಿಕ 1.5 ಲಕ್ಷ ರೂ.
ಲಾಕ್–ಇನ್ ಅವಧಿ: 15 ವರ್ಷಗಳು, ಆದರೆ 5 ವರ್ಷಗಳಿಗೊಮ್ಮೆ ವಿಸ್ತರಣೆಯ ಆಯ್ಕೆ.
ಸಾಲ ಸೌಲಭ್ಯ: ಖಾತೆ ತೆರೆದ ಒಂದು ವರ್ಷದ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಬಹುದು; 5 ವರ್ಷಗಳ ನಂತರ ಭಾಗಶಃ ಹಿಂಪಡೆಯುವ ಸೌಲಭ್ಯ.
ಭವಿಷ್ಯಕ್ಕೆ ಆರ್ಥಿಕ ಬೆಂಬಲ:
ನೀವು ಪ್ರತಿ ತಿಂಗಳು 12,500 ರೂ. (ವಾರ್ಷಿಕ 1.5 ಲಕ್ಷ ರೂ.) ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 22.5 ಲಕ್ಷ ರೂ. ಠೇವಣಿಯಿಂದ 18.18 ಲಕ್ಷ ರೂ. ಬಡ್ಡಿಯೊಂದಿಗೆ ಒಟ್ಟು 40.68 ಲಕ್ಷ ರೂ. ನಿಧಿಯನ್ನು ಸಂಗ್ರಹಿಸಬಹುದು. ಶಿಸ್ತಿನ ಹೂಡಿಕೆಯಿಂದ ಈ ಯೋಜನೆ ನಿವೃತ್ತಿ ಅಥವಾ ಮಕ್ಕಳ ಭವಿಷ್ಯಕ್ಕೆ ಬಲವಾದ ಆರ್ಥಿಕ ಬೆಂಬಲವನ್ನು ನಿಮಗೆ ಒದಗಿಸುತ್ತದೆ.
ಸುರಕ್ಷಿತ ಯೋಜನೆ:
PPF ಯೋಜನೆಯು ಸುರಕ್ಷಿತ, ತೆರಿಗೆ-ಅನುಕೂಲಕರ ಮತ್ತು ದೀರ್ಘಾವಧಿಯ ಲಾಭದಾಯಕ ಆಯ್ಕೆಯಾಗಿದೆ. ಕಡಿಮೆ ಆದಾಯದವರಿಗೂ ಇದು ಸುಲಭವಾಗಿ ಲಭ್ಯವಿದ್ದು, ಶಿಸ್ತಿನ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಪ್ರತಿ ಕುಟುಂಬವು ತಮ್ಮ ಹಣಕಾಸು ಯೋಜನೆಯಲ್ಲಿ PPF ಅನ್ನು ಪರಿಗಣಿಸಬೇಕು. ಒಂದಷ್ಟು ಮೊತ್ತ ಹೂಡಿಕೆ ಮಾಡುವ ಮತ್ತು ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುವ ಮನಸ್ಸಿದ್ದರೆ ಖಂಡಿತವಾಗಲೂ PPF ಖಾತೆಯನ್ನು ನೀವು ತೆರೆಯಲೇಬೇಕು












