ಕುಂಜಾರುಗಿರಿ: ಅವಳಿ ಕರುವಿಗೆ ಜನ್ಮ‌ ನೀಡಿದ ಹಸು

ಉಡುಪಿ: ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಕುಂಜಾರುಗಿರಿಯಲ್ಲಿ‌ ನಡೆದಿದೆ.
ಕುಂಜಾರುಗಿರಿಯ ಪಾಜೈಯ ಕೃಷಿಕ ಹಾಗೂ‌ ಬಾಣಸಿಗ ಬಾಲಕೃಷ್ಣ ಭಟ್ ಅವರ ಮನೆಯ ದನವು ಅವಳಿ ಕರುಗಳಿಗೆ ಜನ್ಮನೀಡಿದೆ. ಒಂದು ಹೆಣ್ಣು ಹಾಗೂ ಒಂದು ಗಂಡು ಕರು ಹಾಕಿದ್ದು, ಎರಡು‌ ಕರುಗಳು‌ ಆರೋಗ್ಯವಂತಾಗಿವೆ. ಈ ಕರುಗಳನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ.