ಉಡುಪಿ: ಮೂವರು ಮುಸುಕುಧಾರಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿಯ ಕುಕ್ಕಿಕಟ್ಟೆಯ ಕಲ್ಯಾಣನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮೂವರು ಮುಸುಕುಧಾರಿ ಕಳ್ಳರು ಕುಕ್ಕಿಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂವರ ತಂಡವು ಕಲ್ಯಾಣನಗರದ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದೆ. ಈ ವೇಳೆ ಇನ್ನೊಂದು ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕಳ್ಳರ ತಂಡ ಬೇರೆ ಕಡೆಯೂ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.












