ಉಡುಪಿ: ಹಿರಿಯ ಕೃಷಿಕ ರೋಬರ್ಟ್ ಫೆರ್ನಾಂಡಿಸ್ ನಿಧನ

ಉಡುಪಿ: ಹಿರಿಯ ಕೃಷಿಕರು, ಮಂಡಲ ಪಂಚಾಯತ್ ಸದಸ್ಯರಾಗಿದ್ದ ಉದ್ಯಾವರದ ಸಂಪಿಗೆ ನಗರ ನಿವಾಸಿ ರೋಬರ್ಟ್‌ ಫೆರ್ನಾಡಿಸ್ (86) ಅ.30ರಂದು ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಉಡುಪಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ರೋಯ್ಸ್ ಫೆರ್ನಾಂಡಿಸ್‌ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.