ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಉಚಿತ ಸೇವೆಯ ಆಂಬುಲೆನ್ಸ್ ವಾಹನದ ವಾರ್ಷಿಕ ವಿಮಾ ಕಂತನ್ನು ಪಾವತಿಸಲು ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ನೆರವು ನೀಡಿತು.
13,450 ರೂ ಮೊತ್ತದ ಚೆಕ್ ಅನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಅವರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿಗಳಾದ ಗ್ಲೋರಿಯಾ, ಸನಾಲಿ ಶೆಟ್ಟಿ, ರಮೇಶ್ ದೇವಾಡಿಗ ಉಪಸ್ಥಿತರಿದ್ದರು. ಹಾಗೆಯೇ ಆಂಬುಲೆನ್ಸ್ ವಾಹನಕ್ಕೆಅಳವಡಿಸಲು ಉದ್ಯಮಿ ಉದಯ್ ಕುಮಾರ್ ಅವರು ಪ್ಯಾನಿಕ್ ಬಟನ್ ನೀಡಿದರು.












