ಉಡುಪಿ: ಅದಿತಿ ಮೆಹೆಂದಳೆ ಅವರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 91.8 % ದೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ.
ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ಸಂಸ್ಥಾಪಕಿ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿದ್ದು, ಉಡುಪಿಯ ಕೇಶವ್ ಮೆಹೆಂದಳೆ ಹಾಗು ರಂಜನಾ ಇವರ ಪುತ್ರಿ ಆಗಿದ್ದಾರೆ. ಪ್ರಸ್ತುತ ಮಣಿಪಾಲದ ಮಾಹೆ ಅಡಿಯಲ್ಲಿ ಬರುವ ಮಣಿಪಾಲ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್ ಇಲ್ಲಿ ಬ್ಯಾಚುಲರ್ ಇನ್ ಮೀಡಿಯಾ ಅಂಡ್ ಕಮ್ಯುನಿಕೇಷನ್ ವ್ಯಾಸಂಗ ಮಾಡಿತಿದ್ದಾಳೆ.












