ಕಾರ್ಕಳ: ತಾಲೂಕಿನ ಕುಂಟಲ್ಪಾಡಿಯಲ್ಲಿ ಮಂಗಳೂರು ಮೂಲದ ನವೀನ್ ಪೂಜಾರಿ (50) ಎಂಬವರನ್ನು ಕೊಲೆ ಮಾಡಲಾಗಿದೆ.
ಮಂಗಳವಾರ (ಆ.26) ಬೆಳಗಿನ ಹೊತ್ತಿಗೆ ಈ ಘಟನೆ ಪತ್ತೆಯಾಗಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ನವೀನ್ ಪೂಜಾರಿ ಕಾರ್ಕಳದಲ್ಲಿ ನೆಲೆಸಿ ಬಡ್ಡಿ ವ್ಯಾಪಾರ ನಡೆಸುತ್ತಿದ್ದವರು ಎಂದು ತಿಳಿದುಬಂದಿದೆ. ಪೋಲೀಸರು ಸಹಕಾರದಿಂದ ತನಿಖೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಎಎಸ್ಪಿ ಡಾ.ಹರ್ಷ ಪ್ರಿಯಾಂವದ ಹಾಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆನಡೆಸುತ್ತಿದ್ದಾರೆ












