ಮಣಿಪಾಲ: ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೋಡಿಯ ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಇದರ ವತಿಯಿಂದ ಅಶ್ವತ್ಥ ಕಟ್ಟೆಯ ನವೀಕರಣ, ಭಜನಾ ಮಂದಿರದ ವಠಾರದಲ್ಲಿ ಶಾಶ್ವತ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಛೇರಿ ಹಾಗೂ ಇತರ ಕಾಮಗಾರಿಗಳ ಮನವಿ ಬಿಡುಗಡೆ ಕಾರ್ಯಕ್ರಮವು ದಿನಾಂಕ ಅಗಸ್ಟ್ 24 ರಂದು ಜರಗಿತು.
ಅಧ್ಯಕ್ಷತೆಯನ್ನು 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಭಾಗವಹಿಸಿದ್ದರು. ಅರ್ಬಿ ಶ್ರೀ ಬ್ರಹ್ಮರಾಮೆಶ್ವರ ಭಜನಾ ಮಂಡಳಿಯ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್, ಶ್ರೀ ವೈಷ್ಣವಿದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಜಯರಾಜ್ ಹೆಗ್ಡೆ, ಅರ್ಬಿ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗುರುಸ್ವಾಮಿ ಸದಾಶಿವ ನಾಯಕ್, ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಮುರಳಿ ನಾಯಕ್ ಉಪಸ್ಥಿತರಿದ್ದರು. ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಸತೀಶ್ ಪೂಜಾರಿ ಸ್ವಾಗತಿಸಿದರು, ಉಪಾಧ್ಯಕ್ಷರಾದ ನೀಲೇಶ್ ನಾಯ್ಕ್ ಧನ್ಯವಾದ ನೀಡಿದರು, ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯಕ್ ಮತ್ತು ಮಹಿಳಾ ಕೋಶಾಧಿಕಾರಿ ಕು. ವೈಷ್ಣವಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.












