ಎಂ ಐ ಟಿ ಕೆ ಯಲ್ಲಿ ಎಂ ಬಿ ಎ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಇತ್ತೀಚೆಗೆ ಮೈಕ್ರೋ ಸೆಷನ್ ಆನ್ ಎಂಟ್ರೆಪ್ರೆನರ್ ಶಿಪ್ ಎಂಡ್ ಇಂಡಸ್ಟ್ರಿ ಟ್ರೆಂಡ್ಸ್ ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ನಡೆಸಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಶ್ರುತಿ ದಿನಕರ್, ಫೌಂಡರ್, ಸಿಇಒ ಅವಿನ್ಯ ಟ್ಯಾಲೆಂಟ್ (ಕೆನಡಾ) ಇವರು ಆಗಮಿಸಿ ಇಂದಿನ ಎ ಐ ಯುಗದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಹೇಗೆ ಒಬ್ಬ ಯಶಸ್ವೀ ಎಂಟ್ರೇ ಪ್ರೇನರ್ ಆಗಬಹುದು ಅನ್ನುವುದರ ಬಗ್ಗೆ ಸಲಹೆ ನೀಡಿದರು. ಈ ಕಾರ್ಯಕ್ರಮವು ಒಳ್ಳೆಯ ವಿಷಯಾಂತರದ ಮಾತುಕತೆಯಾಗಿ ಮೂಡಿ ಬಂದಿತು.

ಈ ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ಹೆಗ್ಡೆ ಡೈರೆಕ್ಟರ್, ಬ್ರ್ಯಾಂಡ್ ಬಿಲ್ಡಿಂಗ್ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್, ಡಾ . ಸತ್ಯಜಿತ್ ಡೈರೆಕ್ಟರ್ ಐ.ಎಂ.ಜೆ ರಿಸರ್ಚ್ ಸೆಂಟರ್ , ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರ ಪೂಜಾರಿ ಹಾಗೂ ಇತರ ಉಪನ್ಯಾಸಕರು ಎಂ ಬಿ ಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಸಿಂಚನ ಪ್ರಥಮ ಎಂ.ಬಿ.ಎ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.