ಬಂಟಕಲ್: ಸೋದೆ ಶಿಕ್ಷಣ ಸಂಸ್ಥೆ ಸಮೂಹ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ, (ಮಾಹೆ) ಜೊತೆ ಒಡಂಬಡಿಕೆ

ಉಡುಪಿ, ಬಂಟಕಲ್: ಶ್ರೀ ಸೋದೆ ವಾದಿರಾಜ ಮಠ
ಶಿಕ್ಷಣ ಸಂಸ್ಥೆ ಸಮೂಹ ಮತ್ತು ಮಣಿಪಾಲ ಉನ್ನತ ಶಿಕ್ಷಣ
ಅಕಾಡೆಮಿ, (ಮಾಹೆ) ಮಣಿಪಾಲ ಜೊತೆ ದಿನಾಂಕ 22 ಆಗಸ್ಟ್
2025 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.

ಈ ಒಪ್ಪಂದವು ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ,
ಸಂಶೋಧನೆಯಲ್ಲಿ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯ
ಕ್ಷೇತ್ರದಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ
ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಜ್ಞಾನವನ್ನು
ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹ್ಯಾಕಥಾನ್, ಇಂಟರ್ನ್ಶಿಪ್, ಮತ್ತು ಸಣ್ಣ ಪ್ರಾಜೆಕ್ಟ್ಗಳ ಮೂಲಕ ತಮ್ಮ ಕೌಶಲ್ಯಗಳನ್ನು ಮತ್ತು ವೃತ್ತಿಪರ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವಂತಹ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಎರಡೂ ಸಂಸ್ಥೆಗಳು ಜೊತೆಯಾಗಿ ಜ್ಞಾನ ವಿನಿಮಯ ಮತ್ತು ಸಂಪರ್ಕ ನಿರ್ಮಾಣಕ್ಕೆ ವೇದಿಕೆ ಸೃಷ್ಟಿಸಲಿದೆ.

ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಉಪಕರಣಗಳನ್ನು
ಪರಸ್ಪರ ಬಳಸಲು ಅವಕಾಶ ಮಾಡಿಕೊಡಲಾಗಿದ್ದು,
ಸಂಶೋಧಕರಿಗೆ ವಿಶ್ವಮಟ್ಟದ ಸೌಲಭ್ಯ ದೊರಕಲಿದೆ.
ಜೊತೆಗೆ, ಬಾಹ್ಯ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಅಂತರ
ವಿಭಾಗೀಯ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು
ಹೆಚ್ಚುವರಿ ಕೋರ್ಸ್ಗಳನ್ನು ರೂಪಿಸುವುದಕ್ಕೆ ಸಹಕಾರ
ನಡೆಯಲಿದೆ.

ಉದ್ಯಮಶೀಲತೆ ಮತ್ತು ನವೀನತೆ ಅಭಿವೃದ್ಧಿಗೆ ಪ್ರಮುಖವಾದ
ಈ ಸಹಕಾರ, ಇನ್ಕ್ಯುಬೇಶನ್ ಸೆಂಟರ್‌ಗಳು, ತಜ್ಞ
ಮಾರ್ಗದರ್ಶನ ಮತ್ತು ರಾಷ್ಟ್ರೀಯ, ಅಂತರಾಷ್ಟ್ರೀಯ ನಿಧಿ
ಪಡೆಯಲು ಸಹಕಾರ ನೀಡುತ್ತದೆ. ವಿದ್ಯಾರ್ಥಿಗಳು ಮತ್ತು
ಸಿಬ್ಬಂದಿಗಳು ತಮ್ಮ ಸಾಹಸಾತ್ಮಕ ಆಲೋಚನೆಗಳನ್ನು
ಸಾಕಾರ ಮಾಡಲು ಸಾಧ್ಯವಾಗಲಿದೆ.

ಒಪ್ಪಂದದ ಕಾರ್ಯಕ್ರಮದಲ್ಲಿ ಸೋದೆ ಸಮೂಹ ಶಿಕ್ಷಣ
ಸಂಸ್ಥೆಗಳ ಕಾರ್ಯದರ್ಶಿ ಶ್ರೀ ರತ್ನಕುಮಾರ್ ಹಾಗೂ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಡೀನ್‌ಗಳಾದ ಡಾ.ಸುದರ್ಶನ್ ರಾವ್, ಡಾ. ಸಚಿನ್ ಭಟ್, ಭೌತಶಾಸ್ತç ವಿಭಾಗ ಮುಖ್ಯಸ್ಥ ಡಾ. ರವೀಂದ್ರ ಎಚ್ ಜೆ ಮತ್ತು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಹೆಚ್ ಎಸ್ ಬಲ್ಲಾಳ್, ಸಹ ಉಪಕುಲಪತಿಗಳಾದ ಡಾ.ನಾರಾಯಣ ಸಭಾಹಿತ್, ಕುಲಸಚಿವರಾದ ಡಾ. ಗಿರಿಧರ ಕಿಣಿ, ರಿಜಿಸ್ಟಾçರ್, ಡಾ.ಹರೀಶ್ ಕುಮಾರ್ ಎಸ್, ನಿರ್ದೇಶಕರು-ಕಾರ್ಪೋರೇಟ್ ರಿಲೇಶನ್ಸ್, ಶ್ರೀ ಎಚ್ ಭರತ್ ಕುಮಾರ್, ನಿರ್ದೇಶಕರು, ಪತ್ರಿಕೆ ಮತ್ತು ಮಾಧ್ಯಮ ವಿಭಾಗ ಇವರು ಉಪಸ್ಥಿತರಿದ್ದರು.