ಸೃಜನಾತ್ಮಕ ಬರವಣಿಗೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶ: ಹೆಬ್ರಿ ಉದಯ ಕುಮಾರ್ ಶೆಟ್ಟಿ

ಶಂಕರನಾರಾಯಣ: ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಂಡಾಗ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಆಧುನಿಕ ಮಾಧ್ಯಮ ಪ್ರಪಂಚ ವಿಶಾಲ ವ್ಯಾಪ್ತಿ ಹೊಂದಿದ್ದು.
ಸೃಜನಾತ್ಮಕ ಬರವಣಿಗೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಪತ್ರಕರ್ತ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ನೆರಳು ಚಾರಿಟೇಬಲ್ ಟ್ರಸ್ಟ್ ಅರಸಮ್ಮಕಾನು -ಶೇಡಿಮನೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೇರಣಾ ಸರಣಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ದಿನವೂ ಚಿಕ್ಕ ಪುಟ್ಟ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರೆ ನಮ್ಮೊಳಗಿನ ಅಭಿವ್ಯಕ್ತಿಯ ಸೃಜನಶೀಲತೆ ಹೆಚ್ಚಿಸಬಹುದು ಎಂದರು.

ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಈಗಿನಿಂದಲೇ ಬರವಣಿಗೆ ಆರಂಭಿಸಿದರೆ ಪದವಿ ನಂತರ ಉತ್ತಮ ಉದ್ಯೋಗ ಪಡೆಯಲು, ಸಮಾಜಮುಖಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನೆರಳು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಕೆ. ರಾಧಾಕೃಷ್ಣ ಕ್ರಮಧಾರಿ ಪ್ರಾಸ್ತಾವನೆಗೈದರು. ನೆರಳು ಚಾರಿಟೇಬಲ್ ಟ್ರಸ್ಟಿನ ಸದಸ್ಯ ಪ್ರವೀಣ್, ಹೆಬ್ರಿ ಚಾಣಕ್ಯ ಮೆಲೋಡಿಸ್ ನ ಗಾಯಕ ನಿತ್ಯಾನಂದ ಭಟ್ ಉಪಸ್ಥಿತರಿದ್ದರು.ಆಂತರಿಕ ಗುಣಮಟ್ಟ ಭರವಸ ಕೋಶದ ಸಂಚಾಲಕ ಡಾ. ವಸಂತ್. ಜಿ ಸ್ವಾಗತಿಸಿ, ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಕಾರ್ಯಕ್ರಮ ನಿರೂಪಿಸಿ, ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕ ರಮೇಶ್ ವಂದಿಸಿದರು.