ಕಟಪಾಡಿ: ತ್ರಿಶಾ ವಿದ್ಯಾ ಪಿ ಯು ಸಿ ವಿದ್ಯಾರ್ಥಿಗಳಿಗೆ ಆಗಸ್ಟ್ 18 ರಂದು ಸಿಎ ಹಾಗು ಸಿಎಸ್ ಮಾಹಿತಿ ಕಾರ್ಯಗಾರವು ತ್ರಿಶಾ ವಿದ್ಯಾ ಪಿಯು ಕಾಲೇಜಿನ ಕವಿರತ್ನ ಕಾಳಿದಾಸ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ ಎ ಗೋಪಾಲಕೃಷ್ಣ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸತತ ಪರಿಶ್ರಮ ಮಾತ್ರ ನಮ್ಮನ್ನುಗುರಿಯ ಕಡೆಗೆ ಕೊಂಡುಯ್ಯುತ್ತವೆ ಸಿಎ ಹಾಗು ಸಿಎಸ್ ಎನ್ನುವ ಪದವಿ ಪಡೆಯುವುದಕ್ಕೆ ಛಲ ಮತ್ತು ನಂಬಿಕೆ ಇದ್ದಾಗ ಖಂಡಿತವಾಗಿಯೂ ನಾವು ನಮ್ಮ ಗುರಿಯನ್ನು ತಲುಪಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರೊ. ಹರಿಪ್ರಸಾದ್ ಉಪಸ್ಥಿತರಿದ್ದರು. ತ್ರಿಶಾ ಕ್ಲಾಸಸ್‌ನ ಸೆಂಟರ್ ಹೆಡ್ ಡಾ.ವರದರಾಜ್ ವಿದ್ಯಾರ್ಥಿಗಳಿಗೆ ಸಿಎ,ಸಿಎಸ್ ಕ್ಲಾಸಸ್ನ ಬಗ್ಗೆ ಮಾಹಿತಿ ನೀಡಿದರು ಪ್ರಾಧ್ಯಾಪಕರಾದ ನಿಧಿ ಅಮಿನ್ ನಿರೂಪಿಸಿ, ಸರಿತ ವಂದಿಸಿದರು.












