ನವದೆಹಲಿ: ವಿಚ್ಛೇದಿತ ಮಹಿಳೆಗೆ ಜೀವನಾಂಶ ಒದಗಿಸುವಾಗ ಪತಿಯ ಸಾಮರ್ಥ್ಯ ಹಾಗೂ ಪತ್ನಿಯ ಅಗತ್ಯಗಳ ನಡುವೆ ಸಮತೋಲಿತ ಧೋರಣೆ ಅನುಸರಿಸುವುದಕ್ಕೆ ಸುಪ್ರೀಂ ಕೋರ್ಟ್ ಒಲವು ತೋರಿದೆ.
ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಇದ್ದ ಪೀಠ, ವೈದ್ಯ ಪತಿಯು ಎಂಟೆಕ್ (ಕಂಪ್ಯೂಟರ್ ಸೈನ್ಸ್) ಮತ್ತು ಎಲ್ಎಲ್ಬಿ ಪದವಿಗಳನ್ನು ಹೊಂದಿರುವ ಪತ್ನಿಗೆ ನೀಡಬೇಕಾದ ಕಾಯಂ ಪರಿಹಾರ ವನ್ನು 15 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಸುವ ಸಂದರ್ಭ, ಪತಿಗೆ ಹೆಚ್ಚಿನ ಮೊತ್ತ ಪಾವತಿಸುವ ಸಾಮರ್ಥ್ಯವಿದೆ ಎಂಬುದನ್ನು ಗಮನಿಸಿತು. ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಎತ್ತಿ ಹಿಡಿಯಿತು. ಆದರೆ, ಕರ್ನಾಟಕ ಹೈಕೋರ್ಟ್ ನಿಗದಿಪಡಿಸಿದ್ದ ಪರಿಹಾರವನ್ನು 50 ಲಕ್ಷ ರೂ.ಗೆ ಏರಿಸಿತು.












