ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿಂತನೆಗಳ ಮಹತ್ವದ ಕುರಿತು ಸಭೆಗೆ ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ, ಪುರಸಭಾ ಸದಸ್ಯರಾದ ಪ್ರಭಾವತಿ ಜೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಯುವ ಕಾಂಗ್ರೆಸ್ ಇಚ್ಚಿತಾರ್ಥ ಶೆಟ್ಟಿ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಇಂಟಕ್ ಯುವ ಅದ್ಯಕ್ಷ ಶಶಿರಾಜ್ ಪೂಜಾರಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕೃಷ್ಣ ಪೂಜಾರಿ, ಮುಖಂಡರಾದ ಸುಬಾಶ್ ಪೂಜಾರಿ, ದಿನೇಶ್, ವಿಠ್ಠಲ ಕಾಂಚನ್, ಜನಾರ್ದನ ಖಾರ್ವಿ, ಸತೀಶ್ ಜಪ್ತಿ, ನಾಗರಾಜ ನಾಯ್ಕ, ರಾಘವೇಂದ್ರ ಶೇರೆಗಾರ, ಜ್ಯೋತಿ ಡಿ. ನಾಯ್ಕ, ಶಿವಕುಮಾರ್, ಅಬ್ದುಲ್ಲಾ ಕೋಡಿ, ರಘುರಾಮ ನಾಯ್ಕ, ರಾಜೀವ್ ಶೆಟ್ಟಿ, ಕೋಡಿ ಸುನಿಲ್ ಪೂಜಾರಿ, ಕುಮಾರ ಕೆ. ವಿಜಯ ಪುತ್ರನ್, ರಾಕೇಶ್ ಶೆಟ್ಟಿ, ಸುರೇಂದ್ರ, ಸದಾನಂದ ಖಾರ್ವಿ, ಮುನಾಫ್ ಕೋಡಿ, ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.