ಮೈ ಮನಸ್ಸಿನ ನೆಮ್ಮದಿಗೆ ಎನರ್ಜಿ ಕೊಡುತ್ತೆ ಮನೆಯ ಒಳಾಂಗಣ ವಿನ್ಯಾಸ: ಇಂಟೀರಿಯರ್ ವಿನ್ಯಾಸದಲ್ಲಿದೆ ಆರೋಗ್ಯದ ಗುಟ್ಟು!

ಲೇಖನ : ಹೇಮಾ ನಿರಂಜನ್

ವೇಗವಾಗಿ ಬದಲಾಗುತ್ತಿರುವ ಈಗಿನ ಜಗತ್ತಿನಲ್ಲಿ ಮನೆಗಳು ಆರೋಗ್ಯ ಮತ್ತು ಶಾಂತಿ ಉತ್ತೇಜಿಸುವ ಸುರಕ್ಷಿತ ಸ್ಥಳಗಳಾಗಿರಬೇಕು. ಇದಕ್ಕೆ ಒಳಾಂಗಣ ವಿನ್ಯಾಸವು ಪೂರಕವಾಗಿರಬೇಕು. ಇಂಥ ಆರೋಗ್ಯದಾಯಕ ವಾತಾವರಣ ನಿರ್ಮಿಸಲು ಅಗತ್ಯವಿರುವ ಅಂಶಗಳು ಹೀಗಿವೆ.

ಸ್ಮಾರ್ಟ್ ಸಂಗ್ರಹಣೆ
ಮನೆ ಸ್ವಚ್ಛವಾಗಿದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ. ಯೂನಿವರ್ಸಿಟಿ ಆಫ್ ಕ್ಯಾಲಿ ಫೋರ್ನಿಯಾ ಸಂಶೋಧನೆಯ ಪ್ರಕಾರ, ಇದರಿಂದ ಕಾರ್ಟಿಸಾಲ್ ಹಾರ್ಮೋನ್‌ನ ಉತ್ಪಾದನೆ ಶೇ. 27ರಷ್ಟು ಹೆಚ್ಚುತ್ತದೆ. ಇದಕ್ಕಾಗಿ ಮನೆಯಲ್ಲಿ ಸ್ಮಾರ್ಟ್ ಸ್ಟೋರೇಜ್ ಪರಿಹಾರಗಳನ್ನು ಕಂಡುಕೊಳ್ಳಬೇಕು. ಅಂದರೆ ಫುಶ್ ಟು ಓಪನ್ ಕ್ಯಾಬಿನೆಟ್, ಸ್ಟೋರೇಜ್ ಒಟ್ಟೋಮನ್, ವಿಸ್ತರಿಸಬಲ್ಲ ಊಟದ ಮೇಜು, ಹಾಸಿಗೆ ಕೆಳಗಿನ ಡ್ರಾಯರ್ ಇತ್ಯಾದಿ.

ಒಳಾಂಗಣ ಸಸ್ಯ: ಸ್ನೇಕ್ ಪ್ಲಾಂಟ್ ಅರೆಕಾ ಪಾಮ್, ಪೀಸ್ ಲಿಲ್ಲಿಯಂತಹ ಸಸ್ಯಗಳು ಮನೆಯೊಳಗೆ ಸುಂದರವಾಗಿ ಕಾಣಿಸುವುದರ ಜೊತೆಗೆ ಅವು ವಿಷಾನಿಲಗಳನ್ನು ತೆಗೆದು ಆಮ್ಲಜನಕವನ್ನು ಹೆಚ್ಚಿಸುತ್ತದೆ. ಒಳಾಂಗಣ ಗಾಳಿಯ ಗುಣಮಟ್ಟ ಸುಧಾರಿಸಲು ಪ್ರಕೃತಿಯ ಅದ್ಭುತ ಪರಿಹಾರವಿದು.

ಬಣ್ಣಗಳ ಆಯ್ಕೆ:
ಒಳಾಂಗಣ ಅಲಂಕಾರದ ಬಣ್ಣಗಳು ಮನೆ ಮಂದಿಯ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ. ಈ ಬಣ್ಣಗಳನ್ನು ವೈಜ್ಞಾನಿಕ ರೀತಿಯಲ್ಲಿ ಬಳಸಿ ಮನೆಯನ್ನು ಉತ್ತಮವಾಗಿಸಿ. ಅಧ್ಯಯನ ಮತ್ತು ಮನೆ ಕಚೇರಿಗೆ ಏಕಾಗ್ರತೆ ಹೆಚ್ಚಿಸುವ ಹಸಿರು ಮತ್ತು ಶಾಂತಿ ನೆಲೆಸುವ ನೀಲಿ ಬಣ್ಣ ಆರಿಸಿ. ಮಲಗುವ ಕೋಣೆಗೆ ರಕ್ತದೊತ್ತಡ ಕಡಿಮೆ ಮಾಡುವ ನಸು ನೀಲಿ ಹಾಗೂ ನಿದ್ರೆ ಉತ್ತೇಜಿಸುವ ಲ್ಯಾವೆಂಡರ್ ಬಣ್ಣ ಆಯ್ಕೆ ಮಾಡಿ. ಅಡುಗೆ ಮನೆಗೆ ಆತಂಕ ಕಡಿಮೆ ಮಾಡುವ ಸ್ಟೇಜ್ ಹಸಿರು ಮತ್ತು ಸ್ವಚ್ಛತೆ ನಿರ್ವಹಿಸುವ ಬಿಳಿ ಬಣ್ಣ ಆಯ್ಕೆ ಮಾಡಿ. ಮಕ್ಕಳ ಕೊಠಡಿಗೆ ಆರಾಮ ನೀಡುವ ಗುಲಾಬಿ ಹಾಗೂ ಸೃಜನಶೀಲತೆ ಒದಗಿಸುವ ಹಳದಿ ಬಣ್ಣ ಉಪಯೋಗಿಸಿ.

ತಂತ್ರಜ್ಞಾನ ರಹಿತ ನಿದ್ರಾ ತಾಣ:
ಮಲಗುವ ಕೊಠಡಿಯಲ್ಲಿ ಶಾಂತಿ ನೆಲೆಸಲು ನಿದ್ರೆಗೆ ಅಡ್ಡಿಯಾಗುವ ಮೊಬೈಲ್ ಚಾರ್ಜಿಂಗ್ ಸ್ಥಳಗಳನ್ನು ದೂರವಿಡಿ. ಎಲೆಕ್ಟ್ರಾನಿಕ್ ಅಲರಾಂ ಬದಲು ನೀಲಿ ಬೆಳಕಿನ ಪ್ರಭಾವ ಕಡಿಮೆ ಮಾಡುವ ಸಾಂಪ್ರದಾಯಿಕ ಗಡಿಯಾರ ಬಳಸಿ ಮನೆಯಲ್ಲಿ ಡಿಜಿಟಲ್ ಯಂತ್ರ ಮುಕ್ತವನ್ನಾಗಿ ಮಾಡಿ.

ಪರಿಸರ ಸ್ನೇಹಿ ವಸ್ತು:
ಆರೋಗ್ಯಕರ ವಸ್ತುಗಳಿದ್ದರೆ ಮನೆಯು ಆರೋಗ್ಯಕರವಾಗಿರುತ್ತದೆ ಈ ನಿಟ್ಟಿನಲ್ಲಿ ಮರುಬಳಕೆಯ ಮರದ ಪೀಠೋಪಕರಣ ಅರಣ್ಯ ನಾಶ ಕಡಿಮೆ ಮಾಡುತ್ತದೆ ಇಟ್ಟಿಗೆಯ ಗೋಡೆಗಳು ತಾಪಮಾನವನ್ನು ಸಹಜ ರೀತಿಯಲ್ಲಿ ನಿಯಂತ್ರಿಸುತ್ತದೆ, ವಿ ಓ ಸಿ ರಹಿತ ಬಣ್ಣಗಳು ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟುತ್ತದೆ ಸಾಧ್ಯವಾದಷ್ಟು ಸಾವಯವ ಹತ್ತಿ ಉಣ್ಣೆ ಬಟ್ಟೆಗಳನ್ನು ಬಳಸಿ.

ಅಲಂಕಾರಿಕ ಆಯ್ಕೆ :
ಪ್ರೀತಿ ಪಾತ್ರದ ಚಿತ್ರ ಸಾಧನೆ ಅಥವಾ ವಿಶೇಷ ಕ್ಷಣಗಳನ್ನು ನೋಡುವುದರಿಂದ ದಿನನಿತ್ಯ ಮಾನಸಿಕ ಶಾಂತಿ ಬೆಳೆಯುತ್ತದೆ ಇದರಿಂದ ಒತ್ತಡದ ಹಾರ್ಮೋನು ಕಾರ್ಟಿಸಾಲ ಪ್ರಮಾಣ ಶೇ.15 ಕಡಿಮೆಯಾಗಿ ಸೆರೋಟೋನಿನ್ ಮತ್ತು ಡೋಪಮೈನ್ ಹಾರ್ಮೋನ್ ಗಳು ಹೆಚ್ಚಾಗುತ್ತದೆ.

ಬಾಡಿ ಫ್ರೆಂಡ್ಲಿ ಪೀಠೋಪಕರಣ : ಮನೆಯಲ್ಲಿ ಬೆನ್ನಿಗೆ ಆಧಾರ ನೀಡುವ ಕಚೇರಿ ಕುರ್ಚಿಗಳನ್ನು ಬಳಸಿ. ಮೇಜುಗಳು ಮೊಣಕೈಯ ಎತ್ತರ ಅಂದರೆ 28ರಿಂದ 30 ಇಂಚಿರಲಿ ಟಿವಿಯನ್ನು ಕುಳಿತ ನೋಟದ ಮಟ್ಟದಲ್ಲಿ ಅಳವಡಿಸಿ ಹೀಗೆ ಚೆನ್ನಾಗಿ ವಿನ್ಯಾಸಗೊಳಿಸಿದ ಮನೆಯು ಮನಮಂದಿಯ ಒತ್ತಡ ಕಡಿಮೆ ಮಾಡುತ್ತದೆ ಮತ್ತು ದೈನಂದಿನ ಸಂತೋಷವನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಬೆಳಕಿನ ತಂತ್ರ:
ಮನೆಯೊಳಗಿನ ಬೆಳಕು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಇದಕ್ಕಾಗಿ ಸ್ಕೈ ಲೈಟ್ ದೊಡ್ಡ ಕಿಟಕಿಗಳನ್ನು ಅಳವಡಿಸಿ ಸ್ವಾಭಾವಿಕ ಬೆಳಕನ್ನು ಹೆಚ್ಚಿಸಿ. ಮಾತ್ರವಲ್ಲದೆ ಸರ್ಕೇಡಿಯನ್ ಬೆಳಕಿನ ನಿಯಮ ಅನುಸರಿಸಿ. ಅಂದರೆ ಬೆಳಗ್ಗೆ 5 ಗಂಟೆಯ ತಂಪಾದ ಬೆಳಕಿನಲ್ಲಿ ಎಚ್ಚರವಾಗಬೇಕು ಹಾಗೂ ಸಂಜೆಯ ಈಗಿನ ಬೆಚ್ಚಗಿನ ಬೆಳಕು ನಿದ್ರೆಗೆ ಸಹಕಾರಿಯಾಗಿದೆ. ಸೌರ ಶಕ್ತಿ ಎಲ್ಇಡಿ ದೀಪಗಳ ಬಳಕೆಯಿಂದ ಶೇ 80 ರಷ್ಟು ಶಕ್ತಿ ಉಳಿತಾಯವಾಗುತ್ತದೆ.