ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನವರಾತ್ರಿಯ ಸಂದರ್ಭ ನೂತನ ‘ಅನ್ನಛತ್ರ ಮನಸ್ವಿನಿ’ಯನ್ನು ಉದ್ಘಾಟನೆ ಹಾಗೂ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶಿಲಾ ಮತ್ತು ದಾರು ಮುಹೂರ್ತ ಭಾನುವಾರ ನಡೆಯಿತು.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಜೀವನದಲ್ಲಿ ದೇವರ ಸೇವೆಗೆ ಸಿಗುವ ಅವಕಾಶವೆಂದರೆ ಅದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು. ಕ್ಷೇತ್ರದಲ್ಲಿ ಅನ್ನದಾನ ಮಾಡುವುದರಿಂದ ದೇವರ ಮೂರ್ತಿಯಲ್ಲಿ ಸಾನಿಧ್ಯ ವೃದ್ಧಿಸಿ, ಕ್ಷೇತ್ರ ಮಹಿಮೆ ಹೆಚ್ಚುತ್ತದೆ ಅದು ಪುಣ್ಯ ಸಂಪಾದನೆಯ ಮಾರ್ಗ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರ ಗುರುರಾಜ ರಾವ್, ದೇಗುಲದಲ್ಲಿ ಸೇವೆ ಸಲ್ಲಿಸಿದ ರಾಮಕೃಷ್ಣ ಅಡಿಗ, ರಾಘವೇಂದ್ರ ಕೆದ್ಲಾಯ ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾ. ಪಂ ಸದಸ್ಯೆ ನಳಿನಿ ಪ್ರದೀಪ್ ರಾವ್, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಎಸ್. ಕೋಟ್ಯಾನ್, ದೇಗುಲದ ಅರ್ಚಕರಾದ ಚಂದ್ರಶೇಖರ ಅಡಿಗ, ಕೃಷ್ಣ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ರಾಜರಾಮ್ ಶೆಟ್ಟಿ ಬ್ರಹ್ಮಾವರ, ಅಲೆವೂರು ಯೋಗೀಶ್ ಆಚಾರ್ಯ, ಸಾಧು ಶೇರಿಗಾರ್ ಬೆನಗಲ್, ಕೆ. ಟಿ ನಾಯ್ಕ ಚಾಂತಾರು, ಕೆ.ಟಿ. ನಾಯಕ್ ಬಿ.ಎನ್. ಶಂಕರ್ ಪೂಜಾರಿ, ದಾನಿಗಳಾದ ಗಣೇಶ ಅಡಿಗ, ಅನಂತಪದ್ಮನಾಭ ಅಡಿಗ, ಪ್ರತಾಪ್ ಹೆಗ್ಡೆ ಚೇರ್ಕಾಡಿ, ಕುಶಲ್ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಬಸವ ನಾಯಕ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ್ ಮಧ್ಯಸ್ಥ, ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಹೇಮಾ ವಿ. ಬಾಸ್ರಿ, ಸದಾಶಿವ ದೇವಾಡಿಗ, ಮಲ್ಲಿಕಾ ಎಸ್. ಶೆಟ್ಟಿ, ರಮೇಶ್ ನಾಯ್ಕ್, ಸುರೇಂದ್ರ ಸುವರ್ಣ ಉಪಸ್ಥಿತರಿದ್ದರು.
ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ ಪ್ರಸ್ತಾವನೆಗೈದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.