ಉಡುಪಿ: ಹೆಂಡತಿಗೆ ಬೈದು ಆಡಿಯೋ ವೈರಲ್ ಮಾಡಿದ್ದಕ್ಕೆ ಹತ್ಯೆ- ಎಸ್ಪಿ ಹರಿರಾಂ ಶಂಕ‌ರ್ ಮಾಹಿತಿ

ಉಡುಪಿ: ಉಡುಪಿ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಈ ಕೊಲೆಯು ಕ್ಷುಲ್ಲಕ ಕಾರಣಕ್ಕೆ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ಮೂವರು ಬಂಧಿತ ಆರೋಪಿಗಳ ಪೈಕಿ ಇಬ್ಬರು ಈ ಮೊದಲೇ ಕೊಲೆ ಆರೋಪಿಗಳಾಗಿದ್ದಾರೆ ಮತ್ತು ಓರ್ವ ರೌಡಿಶೀಟ‌ರ್ ಕೂಡ ಆಗಿದ್ದ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಕೊಲೆಯಾದ ವ್ಯಕ್ತಿ ಆರೋಪಿಯೊಬ್ಬನ ಪತ್ನಿಗೆ ಬೈದಿದ್ದು, ಆ ಬೈದ ಆಡಿಯೋ ವೈರಲ್ ಆಗಿತ್ತು. ಇಂತಹ ಕ್ಷುಲ್ಲಕ ವಿಚಾರ ಬೆಳೆದು ನಿನ್ನೆ ರಾತ್ರಿಯ ಕೊಲೆಯಲ್ಲಿ ಕೊನೆಗೊಂಡಿದೆ. ಈ ಬಗ್ಗೆ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.