ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಹವಾ ದಿನೇ ದಿನೇ ಜೋರಾಗ್ತಾ ಇದೆ. ನಾಳೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಗಾಗಿ ಜನ ಈಗಲೇ ಮುಗಿಬೀಳುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿರುವುದು ದೊಡ್ಡ ಸುದ್ದಿ ಮಾಡಿದೆ.ಇನ್ನೊಂದು ವಿಶೇಷ ಅಂದ್ರೆ ವಿದೇಶಗಳಲ್ಲಿಯೂ ಕೂಲಿ ಹವಾ ಜೋರಾಗಿರೋದು.
ಹೌದು ಭಾರತದ ಕೆಲವು ಕಂಪೆನಿಗಳು ಸಿನಿಮಾ ನೋಡಲು ಸಿಬ್ಬಂದಿಗಳಿಗೆ ರಜೆ ಘೋಷಿಸಿದ್ದು, ಸಿಂಗಾಪುರದಲ್ಲಿಯೂ ಕೆಲವು ಕಂಪೆನಿಗಳು ರಜೆ ಘೋಷಣೆ ಮಾಡಿದೆ. ಸಿಂಗಪುರದ ಫಾರ್ಮರ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್ಬಿ ಮಾರ್ಟ್ ಹೆಸರಿನ ಕಂಪೆನಿಗಳು ಆಗಸ್ಟ್ 14 ರಂದು ತಮ್ಮ ಸಿಬ್ಬಂದಿಗೆ ರಜೆ ನೀಡಿವೆ. ಈ ಬಗ್ಗೆ ಸುತ್ತೋಲೆ ಕೂಡ ಬಿಡುಗಡೆಗೊಳಿಸಿದೆ. ಮುಖ್ಯವಾಗಿ ಸಿಂಗಪುರದ ಫಾರ್ಮರ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ತಮಿಳು ಸಿಬ್ಬಂದಿಗೆ ಆಗಸ್ಟ್ 14 ರಂದು ಸಂಬಳ ಸಹಿತ ರಜೆಯನ್ನು ಘೋಪಿಸಿದೆ.
ಎಸ್ಬಿ ಮಾರ್ಟ್ ಎನ್ನುವ ಮಳಿಗೆ ಕೂಡ ಕೂಲಿ’ ಸಿನಿಮಾ ಬಿಡುಗಡೆ ಇರುವ ಕಾರಣ ಅರ್ಧ ದಿನ ರಜೆ ಘೋಷಣೆ ಮಾಡಿದ್ದು. ‘ಕೂಲಿ’ ಸಿನಿಮಾ ಬಿಡುಗಡೆ ಕಾರಣ, ಆಗಸ್ಟ್ 14 ರಂದು ಮಳಿಗೆಯು ಬೆಳಿಗ್ಗೆ 7 ರಿಂದ 11:45ತ ವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಹೇಳಿದೆ.
ಭಾರತದಲ್ಲೂ ರಜೆ:
ಭಾರತದಲ್ಲಿ ವಿಶೇಷವಾಗಿ ಚೆನ್ನೈನಲ್ಲಿ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ‘ಕೂಲಿ’ ಸಿನಿಮಾ ವೀಕ್ಷಿಸಲು ವಿಶೇಷ ರಜೆಯನ್ನು ಮಂಜೂರು ಮಾಡಿವೆ. ಸಾಮಾನ್ಯವಾಗಿ ರಜನೀಕಾಂತ್ ಅಭಿನಯದ ಯಾವುದೇ ಮೂವಿ ರಿಲೀಸ್ ಆದ್ರೂ ಚೈನ್ನೈನಲ್ಲಿ ರಜೆ ಘೋಷಣೆ ಮಾಡುವುದು ಮಾಮೂಲು ಇದೀಗ ಜನ ಕೂಲಿ ಸಿನಿಮಾ ನೋಡಿ ಆನಂದಿಸಲಿ ಅನ್ನೋ ಕಾರಣಕ್ಕೆ ರಜೆ ಘೋಷಿಸಿದೆ. ಅಂದ ಹಾಗೆ ಕೂಲಿ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗುತ್ತಿದೆ. ಕನ್ನಡದ ನಟ ಉಪೇಂದ್ರ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.












