ಪ್ರೈಮ್ ಸಂಸ್ಥೆ ಉಡುಪಿ : ಎಲ್.ಐ.ಸಿ, ಐ.ಬಿ.ಪಿ.ಎಸ್ ಕ್ಲರ್ಕ್ ಪರೀಕ್ಷಾ ತರಬೇತಿ ಪಡೆಯಿರಿ,ಬದುಕು ಕಟ್ಟಿಕೊಳ್ಳಿ

ಉಡುಪಿ: ಭಾರತೀಯ ಜೀವವಿಮಾ ನಿಗಮ (ಎಲ್.ಐ.ಸಿ) 8 ವಲಯಗಳಲ್ಲಿ ಖಾಲಿ ಇರುವ 7,871 ಅಸಿಸ್ಟೆಂಟ್ (ಕ್ಲರ್ಕ್) ಹುದ್ದೆಗಳ ನೇಮಕ ಪರೀಕ್ಷೆಗೆ ಹಾಗೂ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 17 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 12,075 ಕ್ಲರಿಕಲ್ ಹುದ್ದೆಗಳ ನೇಮಕಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಎಲ್.ಐ.ಸಿ ಪ್ರಿಲಿಮ್ಸ್ ಅಕ್ಟೋಬರ್ 21 ಮತ್ತು 22 ರಂದು ಹಾಗೂ ಐಬಿಪಿಎಸ್ ಪ್ರಿಲಿಮ್ಸ್ ಪರೀಕ್ಷೆಯು ಡಿಸಂಬರ್ ತಿಂಗಳಿನಲ್ಲಿ ನಡೆಯಲಿದೆ.

ಈ ಎರಡೂ ನೇಮಕಾತಿ ಪರೀಕ್ಷೆಗಳಿಗೆ ಹಿರಿಯ ಪ್ರಾಧ್ಯಾಪಕ ವೃಂದ ಹಾಗೂ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ  ಅ. 2 ರಿಂದ ನೂತನ ದೈನಂದಿನ ಹಾಗೂ ವಾರಾಂತ್ಯದ ತರಬೇತಿ ತರಗತಿಗಳನ್ನು ಉಡುಪಿ ಬ್ರಹ್ಮಗಿರಿ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ.

2 ಬ್ಯಾಚುಗಳಲ್ಲಿ ಆರಂಭವಾಗಲಿರುವ ಈ ತರಬೇತಿಯ ಪ್ರಥಮ ಬ್ಯಾಚ್ (ಡೈಲಿ ಬ್ಯಚ್) ಇದೇ ಬರುವ ಅಕ್ಟೋಬರ್ 2 ರಿಂದ ಪ್ರತೀ ದಿನ ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1.30 ರ ವರೆಗೆ ಹಾಗೂ ಎರಡನೇ ಬ್ಯಾಚ್ (ವೀಕೆಂಡ್ ತರಬೇತಿ) ಅಕ್ಟೋಬರ್ 12 ರಿಂದ ಪ್ರತೀ ಶನಿವಾರ 2.00-5.00 ಹಾಗೂ ಪ್ರತೀ ಬಾನುವಾರ 9.-4. ಗಂಟೆಯವರೆಗೆ ನಡೆಯಲಿದ್ದು, 200 ಗಂಟೆಗಳ ಈ ತರಬೇತಿ ಪರೀಕ್ಷೆಯ ಮೊದಲನೇ ಹಂತ ಪ್ರಿಲಿಮ್ಸ್ 3 ವಿಷಯಗಳನ್ನೊಳಗೊಂಡ 60 ನಿಮಿಷದಲ್ಲಿ ಉತ್ತರಿಸಬೇಕಾದ 100 ಅಂಕಗಳ ಪತ್ರಿಕೆಗಳಾದ ಇಂಗ್ಲೀಷ್, ರೀಸನಿಂಗ್, ಮ್ಯಥ್ಸ್ ಹಾಗೂ ಎರಡನೇ ಹಂತದ ಮೈನ್ಸ್ ಪರೀಕ್ಷೆಯ 5 ವಿಷಯಗಳನ್ನೊಳಗೊಂಡ 200 ಅಂಕಗಳ ಪತ್ರಿಕೆಗಳಾದ ಇಂಗ್ಲೀಷ್, ರೀಸನಿಂಗ್/ ಕಂಪ್ಯೂಟರ್, ಮ್ಯಥ್ಸ್, ಜನರಲ್ ನಾಲೇಜ್ ಮುಂತಾದ ವಿಷಯ ಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ.

ಏನ್ ವಿಶೇಷ?
ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಕಂಫ್ಯೂಟರ್, ಅಂತರ್ಜಾಲ, ಅನ್ ಲೈನ್ ಪರೀಕ್ಷೆಗೆ ಪವರ್ ಪಾಯಿಂಟ್ ತರಬೇತಿ, ಮಾದರಿ ಪರೀಕ್ಷೆ ಜೊತೆಗೆ ಅಭ್ಯರ್ಥಿಗಳಿಗೆ ಬೇಸಿಕ್ ಮತ್ತು ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಇವು ಸಂಸ್ಥೆಯ ವಿಶೇಷತೆ.

ಎಲ್.ಐ.ಸಿ ಕ್ಲರಿಕಲ್ ಹುದ್ದೆಗೆ 18 ರಿಂದ 30 ವರ್ಷ ತುಂಬಿದ ಯಾವುದೇ ಪದವೀಧರರು ತಾ. 01-10-2019ರ ಒಳಗೆ www.licindia.in ಮೂಲಕ ಹಾಗೂ ಐಬಿಪಿಎಸ್ ಕ್ಲರಿಕಲ್ ಹುದ್ದೆಗೆ 20 ರಿಂದ 28 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 09-10-2019 ರ ಒಳಗೆ www.ibps.in ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

1300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ:
ವಿದ್ಯಾರ್ಥಿಗಳ ವೃತ್ತಿಪರ ಜೀವನಕ್ಕೆ ಉಜ್ವಲ ಭವಿಷ್ಯವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಕರಾವಳಿ ಕರ್ನಾಟಕದ ಈ ಸಂಸ್ಥೆ, ಈಗಾಗಲೇ ಸುಮಾರು 1300 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಈ ಪರೀಕ್ಷೆ ಮಾತ್ರವಲ್ಲದೆ ಮುಂದೆ ಬರಲಿರುವ ಬ್ಯಾಂಕಿಂಗ್ ಹಾಗೂ ಇನ್ನಿತರ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಮುಂತಾದ ಪರೀಕ್ಷೆಗಳಿಗೂ ತಯಾರಿ ನಡೆಸಬಹುದಾಗಿದೆ.

ಅಕ್ಟೋಬರ್ 02 ರಿಂದ ಆರಂಭಗೊಳ್ಳಲಿರುವ ದೈನಂದಿನ ಅಥವಾ ವೀಕೆಂಡ್ ಬ್ಯಾಚಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.