ಬಂಟ್ವಾಳ : ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ, ಮಡಿವಾಳ ಯುವ ಬಳಗ, ಮಹಿಳಾ ಘಟಕದ ಸಹಯೋಗದಲ್ಲಿ ಸಮಾಜ ಬಾಂಧವರ ಸಮ್ಮಿಲನದ ಕಾರ್ಯಕ್ರಮ ” ಕೂಡು ಕುಟುಂಬ 2025″ ಕಂದೂರಿನ ಮಡಿವಾಳ ಮಾಚಿದೇವ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಜಿ. ಕೃಷ್ಣಪ್ಪ ಮಾಸ್ಟರ್ ನೈದಿಲೆ ಬಾಳ್ತಿಲ ಇವರು ದೀಪ ಬೆಳಗಿಸಿ, ಚೆನ್ನೆ ಮಣೆ ಆಡುವ ಮೂಲಕ ಉದ್ಘಾಟಿಸಿದರು. ತಾಲೂಕು ಸಂಘದ ಅಧ್ಯಕ್ಷ ಹರೀಶ್ ಮಂಕುಡೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎನ್.ಕೆ ಶಿವ ನಂದಾವರ, ಸುರೇಶ್ ಬನಾರಿ,ಕೇಶವ ಕಾಶೀಮಠ,ಲಕ್ಷ್ಮಣ ಶರವು,ಕೃಷ್ಣ ಉಳಗುಡ್ಡೆ, ದೇಜಪ್ಪ ಶಿರಿಯಾನ್ ಪೆರಾಜೆ,ದಯಾನಂದ ಕುಕ್ಕಾಜೆ, ರಾಮಣ್ಣ ಅಲದಪದವು,ಸತೀಶ್ ಮಾವಿನಕಟ್ಟೆ, ಚಂದ್ರ ಸೂರಿಕುಮೇರ್, ಸುಧಾಕರ ಬಿ.ಸಿ ರೋಡ್ ಹಾಗೂ ಮಡಿವಾಳ ಯುವಬಳಗದ ಅಧ್ಯಕ್ಷ ನಿತಿನ್ ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ಉಪಸ್ಥಿತರಿದ್ದರು.
ಸ್ಪರ್ಶಾ ಪಂಜಿಕಲ್ಲು, ರಕ್ಷಾ ಇನೋಳಿ ಪ್ರಾರ್ಥಿಸಿ, ಯುವ ಬಳಗದ ಗೌರವಾಧ್ಯಕ್ಷರಾದ ಸಂದೇಶ್ ಕೊಯಿಲ ಸ್ವಾಗತಿಸಿದರು, ಪುಷ್ಪರಾಜ್ ಕುಕ್ಕಾಜೆ ವಂದಿಸಿದರು.ವೆಂಕಟೇಶ್ ಮಾಸ್ತರ್ ಅನಂತಾಡಿ, ರಚನಾ ಕುಂದರ್ ಉಜಿರೆ, ಮಾನಸ ಮಡಿವಾಳ ಕಾಸರಗೋಡು ನಿರೂಪಿಸಿದರು.












