ಕಾರ್ಕಳ: “ನಮ್ಮ ಕಾರ್ಲ” ಸ್ಥಳಿಯ ಪ್ರತಿಭೆಗಳಿಗೆ ತೆರೆದ ಕೈಗನ್ನಡಿ ಯಾಗಿದ್ದು ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಶಾಸಕ ವಿ ಸುನೀಲ್ ಕುಮಾರ್ ತಿಳಿಸಿದರು.
ಕಾರ್ಕಳ ದ ಎಸ್ ವಿ ಟಿ ಕಾಲೇಜಿನ ಸಭಾಂಗಣದಲ್ಲಿ ನಮ್ಮ ಕಾರ್ಲ ಸಹಯೋಗದಲ್ಲಿ ನಡೆದ ಅಪ್ಸರಾ ಕಾರ್ಯಕ್ರಮ ಉಧ್ಘಾಟಿಸಿ ಅವರು ವಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ವಿ.ಟಿ ಸಂಸ್ಥೆಯ ಕೆ.ಪಿ ಶೆಣೈ, ಇಂತಹ ಕಾರ್ಯಕ್ರಮಗಳು ಪ್ರತಿಭೆಗಳಿಗೆ ಪ್ರೊತ್ಸಾಹದ ಚಿಲುಮೆ ಯಾಗಿದೆ ಎಂದರು.
ಮುಖ್ಯ ಅತಿಥಿ ಭಾಗವಹಿಸಿದ್ದ ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಅರ್ಥ ಪೂರ್ಣವಾದ ಈ ಕಾರ್ಯಕ್ರಮ ಪ್ರತಿಭೆಗಳಿಗೆ ತೆರೆದ ಬಾಗಿಲು ಎಂದರು. ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಮಾತನಾಡಿದರು.
ಎಕ್ಸಲೆಂಟ್ ಕಾಲೇಜಿನ ಯುವರಾಜ್ ಜೈನ್ , ಹುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ , ಉಡುಪಿಯ ಬೀಯಿಂಗ್ ಸೋಶಿಯಲ್ ನ ರೂವಾರಿ, ನಿರೂಪಕ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.
ರಾಜೇಂದ್ರ ಭಟ್ ಕಾರ್ಯ ಕ್ರಮ ನಿರೂಪಿಸಿದರು.
ಖ್ಯಾತ ಗಾಯಕರರಾದ ಡಾ .ಅಭಿಷೇಕ್ ರಾವ್ ,ವೈಷ್ಣವಿ ರವಿ, ಕಲಾವತಿ ದಯಾನಂದ್,ಖ್ಯಾತ ಕೊಳಲುವಾದಕ ವರುಣ್ ರಾವ್, ಗಿನ್ನಿಸ್ ದಾಖಲೆಯ ಯೊಗಪಟು ತನುಶ್ರಿ ಪಿತ್ರೋಡಿ, ಖ್ಯಾತ ಸ್ಯಾಕ್ಸೊಫೋನ್ ವಾದಕಿ ಅಂಜಲಿ ಶಾನುಭೋಗ್, ಸ್ಪೀಡ್ ಪೈಂಟರ್ ಕಲಾವಿದ ಪ್ರಧೀಶ್ ಕೆ, ಉಡುಪಿ ಯ ಎಕ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಸದಸ್ಯರಿಂದ ವಿವಿಧ ಕಾರ್ಯಕ್ರಮಗಳು ನಡೆದವು.












