ಪರ್ಕಳ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ.

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ವತಿಯಿಂದ ಪರ್ಕಳ ಪ್ರೌಡ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ” ಕಾರ್ಯಕ್ರಮವು ಶಾಲಾ ಮುಖ್ಯ ಉಪಾಧ್ಯಯರಾದ ಆನಂದ ನಾಯ್ಕ್ ರವರ ಅದ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಅರುಣಾಚಲ ಹೆಗ್ಡೆಯವರು ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಏ ವಿ ಬಾಳಿಗ ಆಸ್ಪತ್ರೆಯ ಸಮುದಾಯ ಕಾರ್ಯ ನಿರ್ವಹಕರಾದ ಸುರೇಶ್ ಎಸ್ ನಾವುರು ರವರು ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಆತ್ರಾಡಿ, ರೋಟರಿ ಅಧ್ಯಕ್ಷರು ಅಬೂಬಕ್ಕರ್ ದೇವಿನಗರ, ಶ್ರೀಮತಿ ಸುಜಾತಾ, ಮೇಲ್ವಿಚಾರಕಿ ಶ್ರೀಮತಿ ಶುಭವತಿ ಮುಂತಾದವರು ಉಪಸ್ಥಿತರಿದ್ದರು.

ಮಣಿಪಾಲ ವಲಯ ಮೇಲ್ವಿಚಾರಕರು ಬಾಲಚಂದ್ರ ರವರು ಎಲ್ಲರನ್ನೂ ಸ್ವಾಗತಿಸಿ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ದ ಬಗ್ಗೆ ಪ್ರಮಾಣ ವಚನ ಭೋದಿಸಿದರು. ಶ್ರೀಮತಿ ಸುಜಾತಾ ರವರು ಸರ್ವರಿಗೂ ಧನ್ಯವಾದವನ್ನಿತ್ತರು. ಶ್ರೀಮತಿ ಶಶಿ ರೇಖಾರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.