ಉಡುಪಿ:ವಿಕಲಚೇತನರಿಗೆ ವಿವಿಧ ತರಬೇತಿ

ಉಡುಪಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕಗಳ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ವಾರಕ್ಕೆ 2 ದಿನದಂತೆ (ಸೋಮವಾರ ಹಾಗೂ ಗುರುವಾರ) ಉಚಿತ ಫಿಸಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಆಡಿಯೋಲಜಿಸ್ಟ್/ಸ್ಪೀಚ್ ಥೆರಪಿಸ್ಟ್ ತಜ್ಞರು ಲಭ್ಯವಿದ್ದು, ದೈಹಿಕ ನ್ಯೂನ್ಯತೆಗೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಕಲಿಕಾ ನ್ಯೂನ್ಯತೆ, ಆಟಿಸಂ, ವಿಕಲಚೇತನರ ಪೋಷಕರಿಗೆ ಆಪ್ತ ಸಮಾಲೋಚನೆ, ವಾಕ್ ಮತ್ತು ಶ್ರವಣ ನ್ಯೂನ್ಯತೆಗೆ ಮತ್ತು ದೃಷ್ಟಿದೋಷಕ್ಕೆ ಸಂಬಂಧಿಸಿದ ತರಬೇತಿಯನ್ನು ತಜ್ಞರಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಳ್ಳಬಹುದಾಗಿದೆ.

ಅಂಧತ್ವ ಮತ್ತು ಮಂದದೃಷ್ಟಿಯುಳ್ಳ ಮಕ್ಕಳಿಗೆ ಬ್ರೈಲ್ ತರಬೇತಿ, ಸ್ಥಳ ಪರಿಜ್ಞಾನ ಹಾಗೂ ಚಲನವಲನ ತರಬೇತಿ ನೀಡಲಾಗುವುದು. ಅಂಗವಿಕಲತೆಗೆ ಅನುಗುಣವಾಗಿ ಅಗತ್ಯವಿರುವ ಕೃತಕಾಂಗ ಜೋಡಣೆ ಮತ್ತು ಸಾಧನ ಸಲಕರಣೆಗಳ ಗುರುತಿಸುವಿಕೆ, ತಯಾರಿ, ವಿತರಣೆ, ನಿರ್ವಹಣೆ, ದುರಸ್ತಿಯನ್ನು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕೃತಕ ಅವಯವ ತಯಾರಿಕಾ ಕೇಂದ್ರದಲ್ಲಿ ಅನುಷ್ಠಾನ ಮಾಡಲಾಗಿದ್ದು, ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ಸಿಗಲಿದೆ.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 0820-2533372, 0820-2532222 [email protected] ಅಥವಾ [email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ಡಿ.ಡಿ.ಆರ್.ಸಿ. ಸದಸ್ಯ ಕಾರ್ಯದರ್ಶಿಗಳ ಕಚೇರಿ ಪ್ರಕಟಣೆ ತಿಳಿಸಿದೆ.