ದುರಂದ್ ಕಪ್ ನಲ್ಲಿ ಮಿಂಚಿದ ಬೆಂಗಳೂರು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಪ್ರತಿಭೆ ಡಾನಿಯಲ್

ಬೆಂಗಳೂರು: ದುರಂದ್ ಕಪ್ ಭಾರತೀಯ ಫುಟ್‌ಬಾಲ್‌ನ ಮಹತ್ತರ ವೇದಿಕೆಯಾಗಿದ್ದು, ಅನೇಕ ಭವಿಷ್ಯದ ತಾರೆಗಳು ತಮ್ಮ ಪ್ರತಿಭೆಯನ್ನು ಮಿಂಚಿಸಿ ಬಳಿಕ ಯಶಸ್ವಿ ವೃತ್ತಿಪಥ ಕಟ್ಟಿಕೊಂಡಿದ್ದಾರೆ.

ಈ ಐಕಾನಿಕ್ ಟೂರ್ನಿಯಲ್ಲೇ ಸುನಿಲ್ ಕ್ಷೇತ್ರಿ ಮೊದಲ ಬಾರಿಗೆ ಗಮನ ಸೆಳೆದಿದ್ದರು. ಇಂಡಿಯನ್ ಆಯಿಲ್ ದುರಂದ್ ಕಪ್ ನ 134ನೇ ಆವೃತ್ತಿಯಲ್ಲಿ ಮಕಕ್ಮಾಯುಮ್ ಡಾನಿಯಲ್ ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಪರ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇಂಡಿಯನ್ ಏರ್ ಫೋರ್ಸ್ ಎಫ್‌ಟಿ ವಿರುದ್ಧದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿ ತಂಡವನ್ನು 3-3 ಕಡೆಗೆ ತಲುಪಿಸಿದರು. ಡಾನಿಯಲ್ ತಮ್ಮ ಫುಟ್‌ಬಾಲ್ ತರಬೇತಿಯನ್ನು ISL ಕ್ಲಬ್ ಚೆನ್ನೈಯನ್ ಯು-17 ಮತ್ತು ರಿಸರ್ವ್ ತಂಡಗಳಲ್ಲಿ ಶುರುಮಾಡಿ, ಬಳಿಕ ಬೆಂಗಳೂರಿನ ಸೌತ್ ಯುನೈಟೆಡ್ ಎಫ್‌ಸಿಗೆ ಸೇರ್ಪಡೆಯಾದರು.

ಈ ಬಗ್ಗೆ ಮಾತನಾಡಿದ ಡಾನಿಯಲ್ “ದುರಂದ್ ಕಪ್‌ನಲ್ಲಿ ಆಟವಾಡುವುದು ನನ್ನ ಕನಸಾಗಿತ್ತು ಎಂದರು. ನಾನು ನನ್ನ ಸಹೋದರರೊಂದಿಗೆ ಮೋಜಿಗಾಗಿ ಫುಟ್‌ಬಾಲ್ ಆಡಲು ಪ್ರಾರಂಭಿಸಿದೆ. ಬಳಿಕ ನನಗೆ ಆಸಕ್ತಿ ಬಂತು ಆದರೆ ಆರಂಭದಲ್ಲಿ ನನಗೆ ಯಾವುದೇ ಬೆಂಬಲವಿರಲಿಲ್ಲ ಜೊತೆಗೆ ನನ್ನ ತಂದೆ ಕೂಡ ನಾನು ಫುಟ್‌ಬಾಲ್ ಆಡುವುದು ಇಷ್ಟವಿರಲಿಲ್ಲ. ಫ್ಯೂಚರ್ ಫುಟ್‌ಬಾಲ್ ಕೋಚಿಂಗ್ ಸೆಂಟರ್ ಅಂಗ್ತಾ (FFCC Angtha)ಗೆ ಆಯ್ಕೆಯಾದಾಗ ಎಲ್ಲರು ಸಂತಸ ವ್ಯಕ್ತಪಡಿಸಿದರು. ಈಗ ನನ್ನ ಪೋಷಕರು ನನ್ನ ಆಟವನ್ನು ನೋಡಿ ಹೆಮ್ಮೆಪಡುತ್ತಿದ್ದಾರೆ ಎಂದರು.

ಡಾನಿಯಲ್ ಮಣಿಪುರ ಸ್ಟೇಟ್ ಲೀಗ್‌ನ ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ ತಂಡಕ್ಕೂ ಆಡಿದ್ದು, ಹಾಗೆಯೇ ಭಾರತದ ಅಂಡರ್ 19 ಸ್ಯಾಫ್ ಚಾಂಪಿಯನ್‌ಶಿಪ್‌ಗಾಗಿ ಕೂಡ ಆಯ್ಕೆಯಾಗಿದ್ದರು.

ಫುಟ್‌ಬಾಲ್‌ ಕ್ಷೇತ್ರದಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬುದು ನನ್ನ ಕನಸು ಹಾಗು ನಾನು ಭಾರತೀಯ ಫುಟ್‌ಬಾಲ್‌ನ ಲೆಜೆಂಡ್ ಆಗಬೇಕೆಂಬುದು ನನ್ನ ಗುರಿ ಎಂದರು.