ಉಡುಪಿ:ಆ.25 ವೈಜ್ಞಾನಿಕ ತಾರಸಿ ಕೃಷಿ ತರಬೇತಿ

ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಗಸ್ಟ್ 25 ರಂದು ಒಂದು ದಿನದ ವೈಜ್ಞಾನಿಕ ತಾರಸಿ ಕೃಷಿ
ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಬಗೆಯ ಬಳ್ಳಿ ತರಕಾರಿಗಳು, ಗಿಡ ತರಕಾರಿಗಳು ಮತ್ತು ಸೊಪ್ಪು
ತರಕಾರಿಗಳನ್ನು ಬೆಳೆಸುವ ವೈಜ್ಞಾನಿಕ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ನೀಡಲಾಗುವುದು.

ಆಸಕ್ತ ಯುವಕ, ಯುವತಿಯರು ಮತ್ತು ನಗರವಾಸಿಗಳು ಆಗಸ್ಟ್ 23 ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 8722247552 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.