ಕೋಟ: ಜಿ.ಎಸ್.ಬಿ. ಸಮಾಜದ ಮುತೈದೆಯರ ಶ್ರೇಷ್ಠ ಆಚರಣೆಗಳಲ್ಲಿ ಒಂದಾಗಿರುವ ಶ್ರಾವಣ ಮಾಸದ ಚೂಡಿ ಪೂಜೆ ಕಾರ್ಯಕ್ರಮ ಆ.3 ರಂದು ಶಿರಿಯಾರ ಪರಿಸರದ ಜಿ.ಎಸ್.ಬಿ. ಮಹಿಳೆಯರಿಂದ ಶಿರಿಯಾರ ರಾಮ ಮಂದಿರದಲ್ಲಿ ಜರಗಿತು.
ಸಿಂಹ ಮಾಸದ ಶ್ರಾವಣದಲ್ಲಿ ಸೂರ್ಯದೇವನು ಸಿಂಹ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಸೂರ್ಯ ದೇವನ ಬಿಂಬವನ್ನು ರಂಗೋಲಿಯಲ್ಲಿ ಬರೆದು ಗರಿಕೆ, ಲಕ್ಷ್ಮಿ ಸಾನಿಧ್ಯವುಳ್ಳ ಹೂಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸುವುದು ಈ ಪೂಜೆಯ ವಾಡಿಕೆಯಾಗಿದ್ದು ಅದೇ ಮಾದರಿಯಲ್ಲಿ ಪೂಜೆ ಜರುಗಿತು. ಹಾಗೂ ಗರಿಕೆ ಹುಲ್ಲಿನೊಂದಿಗೆ ರಥ ಪುಷ್ಪ, ಕರ ವೀರ, ಮಿಠಾಯಿ ಹೂವು ಮೊದಲಾದವುಗಳನ್ನು ಜೋಡಿಸಿ ಬಾಳೆನಿಂದ ಚೋಡಿ ಕಟ್ಟಲಾಯಿತು. ಪೂಜೆಯ ಅನಂತರ ಹಿರಿಯರ ಆಶೀರ್ವಾದ ಪಡೆಯಲಾಯಿತು.
ಈ ಪ್ರಯುಕ್ತ ರಾಮ ಮಂದಿರದ ದೇವರಿಗೆ ವಿಶೇಷ ಪೂಜೆ ಹಾಗೂ ಜಿ.ಎಸ್ .ಬಿ ಸಮಾಜದ ಮಹಿಳಾ ಸಂಘಟನೆಯ ಪ್ರಮುಖರು ಇದ್ದರು.












