ಉಗುರಿನ ಆರೈಕೆ ಮಾಡಿ ಹಗುರಾಗಿ: ಚಂದದ ಉಗುರಿಗಾಗಿ ಇಷ್ಟೆಲ್ಲಾ ಮಾಡಲೇಬೇಕು

 

ಡಾ.ಹರ್ಷಾ ಕಾಮತ್

ಸ್ವಸ್ಥ ಸುಂದರವಾದ ಉಗುರು ಎಲ್ಲರಿಗೂ ಇಷ್ಟ. ಉಗುರು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಕೆಲವು ಕಾರಣಗಳಿಂದ ಉಗುರುಗಳು ತಮ್ಮ ಸಹಜ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಇದು ಉಗುರುಗಳ ಸೊಂಕು  ಅಥವಾ ನಮ್ಮ ದೇಹದೊಳಗಿನ ಕೆಲವು ಸಮಸ್ಯೆಗಳಿಂದ ಕೂಡ ಆಗಬಹುದು. ಇಲ್ಲಿ ಉಗುರಿನ ಆರೈಕೆ ಬಗ್ಗೆ ನೀವು ಪಾಲಿಸಲೇಬೇಕಾದ ಒಂದಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ ಡಾ.ಹರ್ಷಾ ಕಾಮತ್.

ಉಗುರಿನ ಅಸಹಜತೆ ಬಗ್ಗೆ ನಿಮ್ಗೆ ಗೊತ್ತಿರಲಿ:

  •  ಉಗುರಿನ ಮೇಲೆ ಉದ್ದದ ರೇಖೆಗಳು ಕಂಡುಬಂದಲ್ಲಿ  ಅಗ್ನಿ ಮಾಂದ್ಯ ,ವಿಷಮಾಗ್ನಿ ಹಾಗೂ ಅಜೀರ್ಣತೆಯನ್ನು ಸೂಚಿಸುತ್ತದೆ.
  • ಅಡ್ಡ ರೇಖೆಗಳು ಸೊಂಕು ಹಾಗು ಥೈರಾಯ್ಡ್  ಸಮಸ್ಯೆಯಲ್ಲಿ ಕಂಡುಬರುತ್ತದೆ .
  • ಬಿಳಿ ಕಲೆಗಳು  ಕ್ಯಾಲ್ಷಿಯಂ, ಜಿಂಕ್, ಮೆಗ್ನೀಷಿಯಂ ಕೊರತೆ ಇದ್ದಾಗ ಕಂಡುಬರುತ್ತದೆ .
  • ಹಳದಿ ಉಗುರು ಶಿಲೀಂಧ್ರಗಳ ಸೋಂಕು, ಪಿತ್ತ ಜನಕಾಂಗದ ಸಮಸ್ಯೆಯನ್ನು ಸೂಚಿಸುತ್ತದೆ.
  •  ಮಸುಕಾದ ಉಗುರುಗಳು ಅಲ್ಸರ್, ಕ್ಯಾನ್ಸರ್, ರುಮಾಟಾಯ್ಡ್ ಅರ್ಥ್ರೈಟ್ಸ್ ಇರುವಾಗ ಕಾಣಬಹುದು.
  •  ನಸು ನೀಲಿ ಬಣ್ಣದ ಉಗುರುಗಳು ಆಸ್ತಮಾ ಹಾಗೂ ಅಂಗಾಂಶಗಳಲ್ಲಿ ಆಮ್ಲಜನಕದ ಕೊರತೆಯನ್ನು ಸೂಚಿಸುತ್ತದೆ .
  •  ಉಗುರುಗಳ ಇನ್ಫೆಕ್ಷನ್ ಇದ್ದಾಗ ಅದರ ಬಣ್ಣಬದಲಾವಣೆ, ಉರಿಊತ ಕಾಣಬಹುದು .

ಉಗುರುಗಳು ಸ್ವಸ್ಥವಾಗಿ ಇರಲು ಹೀಗೆ ಮಾಡಿ:

ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪ್ರೋಟೀನ್ ,ಕ್ಯಾಲ್ಷಿಯಂ ವಿರುವ ಆಹಾರ ಸೇವಿಸಿರಿ .ಹಸಿರು ತರಕಾರಿ, ಬೇಳೆ, ಕಾಳು, ಮೊಟ್ಟೆ, ಹಣ್ಣುಗಳನ್ನುಸೇವಿಸಿಸರಿ.

ಇದನ್ನು ಮಾಡಬೇಡಿ:

  • ರಾಸಾಯನಿಕ ಯುಕ್ತ ಸೂಪ್ ಅನ್ನು ಬಳಸಬೇಡಿ .
  • ವಿನಾಕಾರಣ ಕೈಯನ್ನು  ಪದೇಪದೆ ತೊಳೆಯಬೇಡಿ .
  • ಕಾಲಿಗೆ ಶೂ ಸಾಕ್ಸ್ ಬಳಸುವವರು ಸಾಕ್ಸ್ ಅನ್ನು ದಿನಾಲು ಸ್ವಚ್ಛಗೊಳಿಸಿ .
  • ನೇಲ್ ಪಾಲಿಶ್ ಅಥವಾ ನೇಲ್ ಪಾಲಿಶ್ ರಿಮೂವರ್ ಬಳಕೆಯನ್ನು  ಆದಷ್ಟು ಕಡಿಮೆ ಮಾಡಿರಿ

ಸ್ವಚ್ಛ ಉಗುರುಗಳಿಗೆ ಹೀಗೆ ಮಾಡಿ

ದಿನಾಲು ರಾತ್ರಿಯ ವೇಳೆ  ಉಗುರುಗಳನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ನಿಂದ ಮಸಾಜ್ ಮಾಡಿ. ಬೆಳಿಗ್ಗೆ ಬೆಚ್ಚಗಿನ ನೀರನ್ನು  ಬಳಸಿ ತೊಳೆಯಬಹುದು ಹೀಗೆ ಮಾಡುವುದರಿಂದ ಉಗುರುಗಳು ಸುಂದರ ಹಾಗೂ ಸ್ವಸ್ಥ ವಿರುವುತ್ತದೆ.  ನಿಂಬೆಹಣ್ಣಿನ ಸಿಪ್ಪೆಯಿಂದ ಕೂಡ ಉಗುರುಗಳಿಗೆ ಮಸಾಜ್ ಮಾಡಬಹುದು 

  • ಯೋಗಾಸನಗಳಲ್ಲಿ ಚಕ್ರಾಸನ, ಶಲಭಾಸನ, ಹಾಲಾಸನ ಶೀರ್ಷಾಸನ ಮಾಡುವುದರಿಂದ ಉಗುರುಗಳುಆರೋಗ್ಯವಾಗಿರುತ್ತದೆ.
  • ಉಗುರುಗಳ ಇನ್ಫೆಕ್ಷನ್ ಇದ್ದಾಗ ನೀರಿನಲ್ಲಿ ಬೇವಿನ ಎಲೆ ಹಾಗೂ ತುಳಸಿ ಎಲೆ ಹಾಕಿ ಕುದಿಸಿ ತಣ್ಣಗಾದ ನಂತರ ಅದರಲ್ಲಿ ಕೈಯನ್ನು ಹದಿನೈದು ಇಪ್ಪತ್ತು ನಿಮಿಷ ನೆನೆಸಿ ನಂತರ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿರಿ. ಇದರಿಂದ ಸೋಂಕು ಕಡಿಮೆಯಾಗುವುದು .
  • ಆಲ್ವಿರಾ ಜೆಲ್ ಹಾಗೂ ಹಳದಿಯ ಮಿಶ್ರಣ ಕೂಡ ಹಚ್ಚಬಹುದು .
  • ಉಗುರಿನ ಬಣ್ಣದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಡಾಕ್ಟರನ್ನು ಭೇಟಿ ಮಾಡಿ