ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ: ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ, ಇದರ 25ನೇ ವರ್ಷದ ರಜತ ಮಹೋತ್ಸವದ ಕಾರ್ಯಕ್ರಮ “ಬೆಳ್ಳಿ ಬೆಡಗು”ಇದರ ಮೂರನೇ ಕಾರ್ಯಕ್ರಮವು
ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಾಹೆ ಮಣಿಪಾಲ್ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ರಿ. ಕುಕ್ಕೆಹಳ್ಳಿ ಮತ್ತು ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಿ. ಬೆಳ್ಳಂಪಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮ ಬೆಳ್ಳಂಪಳ್ಳಿ ಕುಕ್ಕೆಹಳ್ಳಿ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು. ಕುಮಾರಿ ಸ್ವಪ್ನ ನಾಯಕ್ ಪ್ರಾರ್ಥನೆಯೊಂದಿಗೆ ಸಭೆ ಆರಂಭಿಸಲಾಯುತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಕಾಮತ್ ಕೊಡಂಗೆ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇವರು ವಹಿಸಿದ್ದರು,

ಅತಿಥಿಗಳಾಗಿ ಪುರಂದರ ಕೋಟ್ಯಾನ್ ಅಧ್ಯಕ್ಷರು ಗ್ರಾಮ ಪಂಚಾಯತ್ ಕುಕ್ಕೆಹಳ್ಳಿ. ಡಾ|ಸಬೇಸ್ಟಿನ ಅನಿತಾ ಡಿಸೋಜ ಕೋರ್ಡಿನೇಟರ್ ಸೆಂಟರ್ ಫಾರ್ ಸ್ಟಡೀಸ್ ಏಜಿಂಗ್ ಎಂಸಿಎಚ್ ಪಿ, ಮಾಹೆ ಮಣಿಪಾಲ, ಅಚ್ಚುತ್ತ ಆಚಾರ್ಯ ಅಧ್ಯಕ್ಷರು ವಿಶ್ವಕರ್ಮ ಸಂಘ ರಿ. ಬೆಳ್ಳಂಪಳ್ಳಿ, ಗಣಪತಿ ಪ್ರಭು ಅಧ್ಯಕ್ಷರು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ರಿ. ಕುಕ್ಕೆಹಳ್ಳಿ ಇವರು ಉಪಸ್ಥಿತರಿದ್ದರು.

ಡಾ| ಸೇಬೇಸ್ಟಿನ ಅನಿತಾ ಡಿಸೋಜ಼ರವರು, ಶಿಬಿರದ ಬಗ್ಗೆ ಮಾಹಿತಿಯನ್ನು ನೀಡಿದರು. ಸಭಾಧ್ಯಕ್ಷರು ಈ ಶಿಬಿರವನ್ನು ಕುಕ್ಕೆಹಳ್ಳಿ ವ್ಯಾಪ್ತಿಯಲ್ಲಿ ಮಾಡುವ ಬಗ್ಗೆ ಹಳ್ಳಿಯ ಜನರಿಗೆ ಇದರ ಉಪಯೋಗ ಸಿಗಲಿ ಅಂತ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಈ ಶಿಬಿರದಲ್ಲಿ ಸುಮಾರು 70 ಜನರು ಶಿಬಿರದ ಪ್ರಯೋಜನ ಪಡದುಕೊಂಡರು.
ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ಸ್ವಾಗತಿಸಿ ಪ್ರಾಸ್ತಾವನೆ ಮಂಡಿಸಿದರು
ಶ್ರೀಮತಿ ಅಕ್ಷತಾ ಜಿ ಹೆಗ್ಡೆ ಯವರು ಕಾರ್ಯಕ್ರಮ ನಿರೂಪಿಸಿ, ಸೊಸೈಟಿಯ ಉಪಾಧ್ಯಕ್ಷ ಪಾಂಡುರಂಗ ಕಾಮತ್ ವಂದಿಸಿದರು.