ಉಡುಪಿ: ಡಿಜಿಟಲ್ ಪರಿವರ್ತನೆಯತ್ತ ಇನ್ನೊಂದು ಹೆಜ್ಜೆ ಇಟ್ಟಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ನೂತನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಯುನಿಗ್ಸ್ (UNIGS) ಅನ್ನು ಆಗಸ್ಟ್ 1, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದರ ಮೂಲಕ ಸದಸ್ಯರಿಗೆ ಸುಲಭ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಇಟ್ಟಂತಾಗಿದೆ.
ಈ ಹೊಸ ಯುನಿಗ್ಸ್ ಆಪ್ನ ಮೂಲಕ ಸದಸ್ಯರು ತಮ್ಮ ಖಾತಾ ವಿವರಗಳನ್ನು ನೇರವಾಗಿ ತಮ್ಮ ಮೊಬೈಲ್ನಲ್ಲಿ ನೋಡಬಹುದಾಗಿದೆ. ಈ ಆಪ್ನಲ್ಲಿ ರಿಯಲ್-ಟೈಂ ಬ್ಯಾಲೆನ್ಸ್ ಎಂಕ್ವೈರಿ, ವ್ಯವಹಾರ ಇತಿಹಾಸ, ತಕ್ಷಣದ ನವೀಕರಣಗಳಂತೆ ಅನೇಕ ವೈಶಿಷ್ಟ್ಯಗಳಿವೆ. ಜೊತೆಗೆ ಸದಸ್ಯರು ಮಹತ್ವದ ಸೂಚನೆಗಳನ್ನು ಪಡೆಯಬಹುದಾಗಿದ್ದು, ಗೂಗಲ್ ಪೇ ಮತ್ತು ಫೋನ್ಪೇಂತಹ ಪ್ಲಾಟ್ ಫಾರ್ಮ್ಗಳಿಂದ ನೇರವಾಗಿ ತಮ್ಮ ಕೋ-ಆಪರೇಟಿವ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ.
ಈ ಆಪ್ ಅನ್ನು ಈಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಸಂಸ್ಥೆಯ ನಿರ್ವಹಣಾ ಮಂಡಳಿ ಈ ಯೋಜನೆಯು ಅವರ ಈ ಹೊತ್ತಿನ ಗುರಿಯಾಗಿರುವ “ಮಾಡರ್ನ್ ಹಾಗೂ ಸುಲಭವಾಗಿ ಲಭ್ಯವಾಗುವ ಬ್ಯಾಂಕಿಂಗ್ ಸೇವೆಗಳನ್ನು semi-urban ಮತ್ತು ಗ್ರಾಮೀಣ ಪ್ರದೇಶದ ಸದಸ್ಯರಿಗೆ ಒದಗಿಸುವ” ಕಾರ್ಯಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜಾ ಮಾತನಾಡಿ, ಈ ಹೊಸ ಉಪಕ್ರಮದಿಂದ ಸದಸ್ಯರ ತೃಪ್ತಿ ಹೆಚ್ಚಾಗಿ, ಆಪರೇಷನಲ್ ಸುಧಾರಣೆ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ಸಂವೇದನಾಶೀಲ ಹಾಗೂ ತಂತ್ರಜ್ಞಾನ ದಕ್ಷ ಸೌಲಭ್ಯಗಳು ಲಭ್ಯವಾಗಲಿವೆ ಎಂದು ತಿಳಿಸಿದರು.












