ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರುಷದ ವಿದ್ಯಾರ್ಥಿಗಳಿಗೆ ಓರಿಯೆಂಟೆಷನ್ ಕಾರ್ಯಕ್ರಮವನ್ನು ಜುಲೈ 30 ರಂದು ಹಮ್ಮಿಕೊಂಡಿದ್ದರು. ಸಂಸ್ಥೆಯ ಸಂಸ್ಥಾಪಕ ರಾದ ಸುಬ್ರಹ್ಮಣ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ವಿದ್ಯಾರ್ಥಿ ಆಗುವವರಲ್ಲಿ ಇರಬೇಕಾದ ಶಿಸ್ತು, ಸಂಯಮ, ಆತ್ಮವಿಶ್ವಾಸದ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿದ್ಯೆ ಪಡೆಯುವ ವಿದ್ಯಾರ್ಥಿಯಲ್ಲಿ, ಗುರುವಿನ ಬಗ್ಗೆ ಗೌರವ ಇದ್ದಾಗ ಮಾತ್ರ. ವಿದ್ಯೆ ಒಲಿಯುತ್ತದೆ ಎಂದರು. ನೆರೆದಿದ್ದ ಪೋಷಕರಿಗೆ ಅವರ ಜವಾಬ್ದಾರಿಗಳ ಬಗ್ಗೆ, ಹಾಗೂ ಕಾಲೇಜಿನಲ್ಲಿರುವ ಎಲ್ಲಾ ಸೌಲಭ್ಯಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರದ ಡಾ. ಸೀಮಾ ಜಿ ಭಟ್ ರವರು. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿರುವ ಎಲ್ಲಾ ಕೋರ್ಸ್ ಬಗ್ಗೆ ಹಾಗೂ ಉಪನ್ಯಾಸಕರ ಪರಿಚಯ ವಿದ್ಯಾರ್ಥಿಗಳಿಗೆ ನೀಡಿದರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿದರು. ವೇದಿಕೆಯಲ್ಲಿ ಕಾಲೇಜಿನ ನಿರ್ದೇಶಕರು ಆದ ಶ್ರೀಮತಿ ಮಮತಾರವರು ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ರವರು ಉಪಸ್ಥಿತರಿದ್ದರು. ನಿರೂಪಣೆಯನ್ನು ಪ್ರಿಯ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ, ಹಾಗೂ ಸ್ವಾಗತವನ್ನು ಸಾಕ್ಷಿತಾ ಆಹಾರ ವಿಭಾಗದ ಉಪನ್ಯಾಸಕಿ, ವಂದನೆಯನ್ನು ವಿಕಾಸ್ ಮೇಟಿ ಕನ್ನಡ ವಿಭಾಗದ ಉಪನ್ಯಾಸಕರು ನೆರವೇರಿಸಿದರು.












