ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಸುಗಳ ತಯಾರಕರ, ಮಾರಾಟಗಾರರ ಸಂಘ ಬ್ರಹ್ಮಾವರ: ಸಂಘದ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ.

ಬ್ರಹ್ಮಾವರ: ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಸುಗಳ ತಯಾರಕರ, ಮಾರಾಟಗಾರರ ಸಂಘ ಮತ್ತು ಸಹಕಾರ ಸಂಘದ ವಾರ್ಷಿಕ ಸಭೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮಾನ ಸಮಾರಂಭ ಬ್ರಹ್ಮಾವರ ಸಿಟಿ ಸೆಂಟರ್‌ನ ಕುಂಕುಮ ಸಭಾಂಗಣದಲ್ಲಿ ಜರಗಿತು.

ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು. ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್, ಉದ್ಯಮಿ ರಂಜನ್ ಕಲ್ಕೂರ ಅತಿಥಿಯಾಗಿದ್ದರು.

ಸಾಧಕರನ್ನು ಸಮ್ಮಾನಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಘದ ಚಟುವಟಿಕೆಗಳಲ್ಲಿ ಪ್ರಮುಖ
ಪಾತ್ರ ವಹಿಸುತ್ತಿರುವ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ದಂಪತಿ ಸಮೇತ ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್‌, ಗೌರವಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ, ಕೋಶಾಧಿಕಾರಿ ಶಶಿಕಾಂತ್ ಜಿ ನಾಯಕ್, ಸಹಕಾರಿಯ ಅಧ್ಯಕ್ಷ ಶ್ರೀಧರ ಪಿ.ಎಸ್‌. ಪದಾಧಿಕಾರಿಗಳಾದ ಸ್ಟ್ಯಾನಿ ಹೆರಾಲ್ಡ್ ಡಿ’ಸೋಜಾ, ಸುದೇವ ಸ್ನಾನ ಹೆರಾಲ್ಡ್ ಡಿ’ಸೋಜಾ, ಸುದೇವ ಶೆಟ್ಟಿ ಕೆ.ಪಿ. ಶ್ರೀಶನ್‌, ದಿವಾಕರ್ ಸನಿಲ್, ಗಣಪತಿ ಮರಕಾಲ, ಕೃಷ್ಣ ಪೂಜಾರಿ ಸದಸ್ಯರಾದ ಅಮೃತ್‌ ಕುಮಾರ್ ತೌಳ, ದುರ್ಗಾ ಪ್ರಸಾದ್, ಸಂದೀಪ, ಚಂದ್ರಶೇಖರ, ಕೃಷ್ಣ ನಾಯ್ಕ ವಿಶ್ವನಾಥ ಜಿ, ಶಶಿಧರ ಗಾಣಿಗ ರಿತೇಶ್ ಸುವರ್ಣ, ಹಸನಬ್ಬ ಅಜಿತ್ ಶೆಟ್ಟಿ, ರಾಘವೇಂದ್ರ ಮಡಿಕುಳ, ಸಂತೋಷ್ ಕುಲಾಲ್, ವಿಶ್ವನಾಥ ಬಿ.ಎಸ್. ಸೋಮಶೇಖರ ಕೆ.ಎಸ್‌. ಸಂತೋಷ್ ಪೂಜಾರಿ, ಕೆ. ಮಂಜುನಾಥ ಕಾಮತ್, ನವೀನ್ ಶೆಟ್ಟ ಮೊದಲಾದವರು ಉಪಸ್ಥಿತರಿದ್ದರು.