ಶ್ರೀ ಕೃಷ್ಣ ಮಠಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ

ಉಡುಪಿ:  ಶ್ರೀ ಕೃಷ್ಣ ಮಠಕ್ಕೆ ಕರ್ನಾಟಕ ಸರ್ಕಾರದ ಗೃಹ ಸಚಿವ  ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಇವರು ಭೇಟಿ ನೀಡಿ ಕೃಷ್ಣ ದೇವರ ದರ್ಶನ ಮಾಡಿದರು.ನಂತರ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಈ ಸಂದರ್ಭದಲ್ಲಿ  ಶಾಸಕರಾದ ರಘುಪತಿ ಭಟ್,ಲಾಲಾಜಿ ಮೆಂಡನ್,ಸುನಿಲ್ ಕುಮಾರ್,ಸುಕುಮಾರ್ ಶೆಟ್ಟಿ ಬಿ.ಜೆ.ಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ,ಉದಯಕುಮಾರ್ ಶೆಟ್ಟಿ,ಸುಪ್ರಸಾದ್ ಶೆಟ್ಟಿ,ಪರ್ಯಾಯ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾದ್ಯಾಯ, ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್  ಮೊದಲಾದವರು ಉಪಸ್ಥಿತರಿದ್ದರು.