Tanuja’S Mind therapy ಅವರ Re Design Your Mind ಕುರಿತು ಕಾರ್ಯಾಗಾರ ಹಾಗೂ ಪುಸ್ತಕ ಬಿಡುಗಡೆ

ಉಡುಪಿ:ಮಣಿಪಾಲದಲ್ಲಿ ಜು.27 ರಂದು Tanuja’S Mind therapy ಅವರ Re Design Your Mind ಕುರಿತು 3 ಗಂಟೆಗಳ ಕಾರ್ಯಾಗಾರವು ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮಣಿಪಾಲದ ಟೀ ಟ್ರೀಟ್ ಸೂಟ್ ಹೊಟೆಲ್ನಲ್ಲಿ ನಡೆಯಿತು.

ಈ ಕಾರ್ಯಗಾರದಲ್ಲಿ ಇಂದಿನ ನಮೆಲ್ಲರ ಜೀವನ ಶೈಲಿ,ಒತ್ತಡ , ಆತಂಕ,ಭಯ ಹೇಗೆ ನಿರ್ವಹಿಸಬಹುದು ಹಾಗೂ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳುವುದರ ಬಗ್ಗೆ ತನುಜಾ ಮಾಬೆನ್ ಅವರು ವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತನುಜಾ ಮಾಬೆನ್ ಅವರ Redesign your Mind ಪುಸ್ತಕವನ್ನು ಇಂಡಿಯನ್ ಕಿಚನ್ ಮಣಿಪಾಲ್ ಮಲ್ಪೆ ಯ ಸಹ ಸಂಸ್ಥಾಪಕ ಅವಿನಾಶ್ ಪೂಜಾರಿ ಇವರು ಬಿಡುಗಡೆ ಮಾಡಿ ಶುಭ ಹಾರೈಸಿದರು.