ಉಡುಪಿ:ಇಂದು ಜುಲೈ 26 ರಂದು ಡಯಾನ ಹೋಟೆಲ್ ನಲ್ಲಿ “ಫ್ಯಾಷನ್ ಮೇಳ-2025” ನ ಉದ್ಘಾಟನೆ ಉಡುಪಿಯ ಗಣ್ಯ ಅತಿಥಿಗಳಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ. ಶಕೀಲಾ ಸಚಿನ್ – ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ,ಲಯನ್ಸ್ ಕ್ಲಬ್ ಅಧ್ಯಕ್ಷರು, ಮಣಿಪಾಲ,ಸಪ್ನಾ ಸುರೇಶ್ – ಜಿಲ್ಲಾ ಗವರ್ನರ್ 317 ಸಿ ,ಉಡುಪಿ,ರಜನಿ ಹೆಬ್ಬಾರ್ – ಪುರಸಭೆ ಉಪಾಧ್ಯಕ್ಷೆ, ಉಡುಪಿ, ಸುಗುಣ ಶಂಕರ್ ಸುವರ್ಣ-ಸುಗುಣ ಇಂಡಸ್ಟ್ರೀಸ್ ಮತ್ತು ಹಾರ್ಡ್ವೇರ್, ಮಾಲೀಕರು, ಉಡುಪಿ ಇವರು ಪಾಲ್ಗೊಂಡಿದ್ದರು.
ಇಲ್ಲಿ ವಿವಿಧ ರೀತಿಯ ಸೀರೆಗಳು, ಹೊಲಿದ ಹೊಲಿಯದ, ಉಡುಗೆ ತೊಡುಗೆ ಸಾಮಗ್ರಿಗಳು, ಸಲ್ವಾರ್, ಆಭರಣಗಳು – ಬೆಳ್ಳಿ ಆಭರಣಗಳು / ಚಿನ್ನದ ಆಭರಣಗಳು, ವಜ್ರಗಳು, ರತ್ನದ ಕಲ್ಲುಗಳು / ಬೆಡ್ ಲಿನಿನ್ಗಳು / ಕೈಯಿಂದ ಮಾಡಿದ ಚೀಲಗಳು, ಹೋಮ್ ಡೆಕೋರ್ಸ್, ಗಿಫ್ಟಿಂಗ್, ಇವೆಲ್ಲವೂ ಈ ಫ್ಯಾಷನ್ ಮೇಳದಲ್ಲಿ ಇರಲಿವೆ.

















