ಹೆಬ್ರಿ: ಹೋಟೆಲ್‌ನಲ್ಲಿ ಹಲ್ಲೆ ಪ್ರಕರಣ; ನಾಲ್ವರು ರೌಡಿಶೀಟರ್‌ಗಳ ಬಂಧನ

ಹೆಬ್ರಿ: ಹೆಬ್ರಿ ಠಾಣೆ ವ್ಯಾಪ್ತಿಯ 38ನೇ ಕಳ್ತೂರು ಗ್ರಾಮದ ಕಳ್ತೂರು ಸಂತೆಕಟ್ಟೆಯಲ್ಲಿರುವ ಹೋಟೆಲ್‌ನಲ್ಲಿ ಜುಲೈ 20ರಂದು ನಡೆದ ಪತ್ಯೇಕ ಘಟನೆಗೆ ಸಂಬಂಧಿಸಿ ನಾಲ್ವರು ರೌಡಿಶೀಟರ್‌ಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ರೌಡಿ ಶೀಟರ್‌ಗಳಾದ ಶ್ರೀಕಾಂತ್‌ ಕುಲಾಲ್‌, ಸದಾನಂದ ಪೂಜಾರಿ, ಸಂತೋಷ ನಾಯ್ಕ, ರಾಜ (ರಾಜೇಶ ನಾಯ್ಕ) ಬಂಧಿತರು.

ಶ್ರೀಕಾಂತ್‌ ಕುಲಾಲ್‌, ಸದಾನಂದ ಪೂಜಾರಿ, ಸಂತೋಷ ನಾಯ್ಕ ಅವರೊಂದಿಗೆ ಸೇರಿ ಹಳೇ ರೌಡಿಶೀಟರ್‌ ರಾಜ ಯಾನೆ ರಾಜೇಶ ನಾಯ್ಕ ಎಂಬುವನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದರು. ಈ ಸಂಬಂಧ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜೇಶ್‌ ನಾಯ್ಕ ಎಂಬುವರು ಸಂತೋಷ ನಾಯ್ಕ ಎಂಬುವರಿಗೆ ಜಾತಿ ನಿಂದನೆ ಮಾಡಿದ ಬಗ್ಗೆ ಸಂತೋಷ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಯತ್ನ ಪ್ರಕರಣದಲ್ಲಿ ಕಳ್ತೂರು ಸಂತೇಕಟ್ಟೆಯ ಆನಂದ ಕುಲಾಲ್‌ ಪುತ್ರ ಶ್ರೀಕಾಂತ ಕುಲಾಲ್‌, ಕೆಂಜೂರು ಗ್ರಾಮದ ಬಡ್ಕಿನಬೈಲು ಫರಂಗಿಹಿತ್ಲು ಕರಿಯ ನಾಯ್ಕ್‌ ಪುತ್ರ ಸಂತೋಷ ನಾಯ್ಕ, ಕಳ್ತೂರು ಗ್ರಾಮದ ಸಂತೇಕಟ್ಟೆಯ ಸದಾನಂದ ಪೂಜಾರಿ ಅವರನ್ನು ಬಂಧನಕ್ಕೊಳಗಾಗಿದ್ದಾರೆ.

ದಲಿತ ದೌರ್ಜನ್ಯ ಪ್ರಕರಣದಲ್ಲಿ 38ನೇ ಕಳ್ತೂರು ಗ್ರಾಮದ ಹೊಯಿಗೆ ಬೆಳಾರ್‌ ಸುರೇಶ ನಾಯ್ಕ್‌ ಪುತ್ರ ರಾಜ ಯಾನೆ ರಾಜೇಶ್‌ ನಾಯ್ಕನನ್ನು ಬಂಧಿಸಲಾಗಿದೆ.