ಉಡುಪಿ: ಅತ್ರಾಡಿಯಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

ಉಡುಪಿ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಉಡುಪಿ – ಪ್ರಗತಿ ಬಂಧು ಸ್ವಸಹಾಯ ಸಂಘ – ಶೌರ್ಯ ವಿಪತ್ತು ಘಟಕ ಮಣಿಪಾಲ ವಲಯದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಯಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಆತ್ರಾಡಿ ಇವರು ಮಾಡಿದರು. ಸಂಪನ್ಮೂಲ ವ್ಯಕ್ತಿ ಮಣಿಪಾಲ ರೋಟರಿ ಸದಸ್ಯರಾದ ರಾಜಾವರ್ಮ ಅರಿಗರವರು ಪರಿಸರ ಮಾಲಿನ್ಯ ಮತ್ತು, ಗಿಡ ನಾಟಿ ಬಗ್ಗೆ ಮಾಹಿತಿ ಯನ್ನು ನೀಡಿದರು.

ವೇದಿಕೆಯಲ್ಲಿ ಕೃಷಿ ಅಧಿಕಾರಿ ಮಂಜುನಾಥ್ ಪ್ರಸಾದ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಕ್ಯಾಪ್ಟನ್ ಹರೀಶ್ ದೇವಾಡಿಗ ಮತ್ತು ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ರವರು ಉಪಸ್ಥಿತರಿದ್ದರು.

ಶ್ರೀ ಮಂಜುನಾಥ್ ಪ್ರಸಾದ್ ರವರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವಿಮಲಾ ರವರು ಧನ್ಯವಾದವನಿತ್ತರು. ಮಣಿಪಾಲ ವಲಯ ಮೇಲ್ವಿಚಾರಕರಾದ ಬಾಲಚಂದ್ರರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಜರೀನಾ, ಶ್ರೀಮತಿ ಚಂದ್ರಕಲಾ, ವಿಪತ್ತು ಘಟಕದ ಬಾಲಕೃಷ್ಣ, ಶ್ರೀಮತಿ ದಮಯಂತಿ, ಶ್ರೀಮತಿ ರಾಜೇಶ್ವರಿ, ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಸುಹಾಸಿನಿ, ಶ್ರೀಮತಿ ಶಾರದಾ, ಶ್ರೀಮತಿ ಶಬನಾ ಪರ್ವೀನ್, ಮತ್ತಿತರರು ಉಪಸ್ಥಿತರಿದ್ದರು.