ಹೃದಯಾಘಾತದಿಂದ ಸಾವನ್ನಪ್ಪುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಹೃದಯಾಘಾತ ಸಡನ್ನಾಗಿ ಕಾಣಿಸಿಕೊಂಡರೂ, ಹೃದಯಾಘಾತದ ಲಕ್ಷಣಗಳು ತಿಂಗಳ ಮೊದಲೇ ಅಥವಾ ಕೆಲವು ವಾರಗಳ ಮೊದಲೇ ಸಣ್ಣದ್ದಾಗಿ ಗೋಚರಿಸಲು ಶುರುವಾಗುತ್ತದಂತೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ನಿರ್ಲಕ್ಷ ಬೇಡ: ಈ ಮುನ್ನೆಚ್ಚರಿಕೆ ಇರಲಿ
ಹೃದಯಾಘಾತಕ್ಕೆ ಕಾರಣವಾಗುವವರ ಹಲವಾರು ದೈಹಿಕ, ಭಾವನಾತ್ಮಕ ಲಕ್ಷಣಗಳು ನಮಗೆ ತಿಂಗಳು ಅಥವಾ ಕೆಲವು ವಾರಗಳ ಮುಂಚೆಯೇ ಸಂಕೇತಗಳನ್ನು ಕಳುಹಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಎಂ. ನಾಗೇಶ್ ಅವರ ಮಾಹಿತಿ ಪ್ರಕಾರ
ಹೃದಯಾಘಾತಕ್ಕೂ ಕೆಲವು ಸಮಯದ ಮೊದಲು ಆಯಾಸ, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಆತಂಕದ ಭಾವನೆ, ಎದೆ ಭಾರವಾದ ಭಾವನೆ, ನಿದ್ರೆಯ ಸಮಸ್ಯೆ ಮೊದಲೇ ವಿಪರೀತಾಗಿ ಕಾಣಿಸಿಕೊಳ್ಳುತ್ತದಂತೆ. ಕೆಲವರು ಅತೀಯಾಗಿ ಬೆವರುತ್ತಾರೆ ಅವರ ಹೃದಯ ಬಡಿತ, ದಡೆ, ಬೆನ್ನು ಎಡಭುಜದಲ್ಲಿ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆಯಂತೆ.

ಇಂತಹ ಲಕ್ಷಣಗಳು ಬಂದಾಗ ಸುಸ್ತು, ಅಜೀರ್ಣ ಅಥವಾ ಒತ್ತಡ ಅಂತ ನಾವು ತಪ್ಪಾಗಿ ಭಾವಿಸುತ್ತೇವೆ. ಆದರೆ ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ಆದಷ್ಟು ಬೇಗ ಪರೀಕ್ಷೆಗೆ ಒಳಗಾಗುವುದು ಲೇಸು ಇದರಿಂದ ಮುಂದೆ ಆಗುವ ಅಪಾಯಗಳನ್ನು ತಡೆಗಟ್ಟಬಹುದು ಎನ್ನುವುದು ಈ ವೈದ್ಯರ ಅನ್ನಿಸಿಕೆ.
ಈ ಸಂದರ್ಭದಲ್ಲಿ ಮಹಿಳೆಯರು ಸೂಕ್ಷ್ಮ ಅಥವಾ ವಿಲಕ್ಷಣ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅತೀ ಆಯಾಸ, ವಾಕರಿಕೆ, ತಲೆತಿರುಗುವಿಕೆ ಅಥವಾ ಬೆನ್ನು, ದವಡೆಯಲ್ಲಿ ನೋವು ಇವೆಲ್ಲಾ ಮಹಿಳೆಯರಲ್ಲಿ ಜಾಸ್ತಿಯೇ ಕಾಣಿಸಿಕೊಳ್ಳುತ್ತದೆ. ಈ ಸಾಧ್ಯತೆ ಸ್ವಲ್ಪ ಕಂಡರೂ ನಿರ್ಲಕ್ಷ ಮಾಡದೇ ಹೃದಯ ಪರೀಕ್ಷೆ ಮಾಡುವುದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದು.












