ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

ಹೈದರಾಬಾದ್: ಥಾಯ್ಲೆಂಡ್‌ ಫುಕೆಟ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹಾರಾಟ ಆರಂಭಿಸಿದ ಕೆಲ ಸಮಯದಲ್ಲೇ ಹೈದರಾಬಾದ್‌ಗೆ ಮರಳಿತು.

ಬೋಯಿಂಗ್‌ 737 ಮ್ಯಾಕ್ಸ್‌ 8 ವಿಮಾನದಲ್ಲಿ 98 ಪ್ರಯಾಣಿಕರಿದ್ದರು. ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ, ಅದು ಮುಂಜಾನೆ 6.57ರ ಸುಮಾರಿಗೆ ಹೈದರಾಬಾದ್‌ಗೆ ಮರಳಿ ಸುರಕ್ಷಿತವಾಗಿ ಇಳಿಯಿತು.

ಪ್ರಯಾಣಿಕರಿಗಾಗಿ ಬೇರೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ ಎಂದು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಫ್ಲೈಟ್‌ರಾಡಾರ್‌24.ಕಾಮ್ ವೆಬ್‌ಸೈಟ್‌ ಮಾಹಿತಿ ಅನ್ವಯ ಬೆಳಿಗ್ಗೆ 6.40ಕ್ಕೆ ಟೇಕ್‌ ಆಫ್‌ ಆಗಿದ್ದ ಈ ವಿಮಾನವು ಕೆಲ ನಿಮಿಷಗಳಲ್ಲಿ ಇಳಿಯಿತು ಎಂದು ತಿಳಿಸಿದೆ