ಮಂಗಳೂರು: ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯಾ ಭಟ್ ನಿಗೂಢವಾಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್, ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣದ ತನಿಖೆ ಸಂದರ್ಭ ಧರ್ಮಸ್ಥಳ ಪಿಎಸೈ ವಿರುದ್ದ ದುರ್ವರ್ತನೆ, ಗೌಪ್ಯತೆಯ ಉಲ್ಲಂಘನೆಯ ಆರೋಪ ಮಾಡಿದ್ದಾರೆ.
ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಗೌಪ್ಯ ಸಾಕ್ಷಿ ನೀಡಿರುವ ಹೇಳಿಕೆಯನ್ನು ಪಿಎಸ್ಐ ಅವರು ಕಾನೂನುಬಾಹಿರವಾಗಿ ಬಹಿರಂಗಪಡಿಸಿದ್ದಾರೆ. ಎಂದವರು ದೂರಿದ್ದಾರೆ. ಈ ಕುರಿತು ದೂರನ್ನು ಭಾರತದ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ, ಗೃಹಸಚಿವರು, ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಡಿಜಿಪಿಗೆ ಸುಜಾತಾ ಭಟ್ ಅವರು ತಮ್ಮ ವಕೀಲರ ಮೂಲಕ ಸಲ್ಲಿಸಿದ್ದಾರೆ. ಪಿಎಐ ಅವರಿಗೂ ಪ್ರತಿ ಕಳಹಿಸಲಾಗಿದ್ದು ನಿಮ್ಮ ನಿಲುವು ಕಾನೂನಿಗೆ ಸರಿಯಾಗಿ ಇದೆಯೇ, ನ್ಯಾಯಪರವಾಗಿದೆಯೇ ಎನ್ನುವುದು ಸ್ಪಷ್ಟಪಡಿಸಬೇಕು, ನಿಮ್ಮ ಉನ್ನತಾಧಿಕಾರಿಗೂ ಈ ಕುರಿತು ತಿಳಿಯಪಡಿಸಬೇಕು ಎಂದು ಹೇಳಲಾಗಿದೆ.
ಮಾಜಿ ಕಾರ್ಮಿಕನೋರ್ವ ಇತ್ತೀಚೆಗೆ ಮಾಜಸ್ಟ್ರೇಟ್ ಮುಂದೆ ಬಂದು ತಾನು ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂತು ಹಾಕಿದ್ದೇನೆ. ಹೂತು ಹಾಕಿರುವ ಜಾಗ ನನಗೆ ಗೊತ್ತಿದೆ. ಎಂದು ಅಸ್ತಿಪಂಜರದ ಅವಶೇಷ ತಂದಿದ್ದ. ಈ ಕುರಿತು ಪ್ರಕರಣ ದಾಖಲಾಗಿದ್ದರಿಂದ ದೇಶಾದ್ಯಂತ ಎಲ್ಲರ ಗಮನ ಸೆಳೆದಿತ್ತು. ಈ ಪ್ರಕರಣ ಇನ್ನಷ್ಟು ಚುರುಕುಗೊಳ್ಳುತ್ತದೆ ಸತ್ಯ ಹೊರಗೆ ಬರುತ್ತದೆ ಎನ್ನುವ ನಿರೀಕ್ಷೆ ಎಲ್ಲೆಡೆ ಇತ್ತು. ಆದರೆ ಇದೀಗ ಪ್ರಕರಣದ ತನಿಖೆಯನ್ನು ತಡಗೊಳಿಸಲಾಗುತ್ತಿದೆ. ಹೂತು ಹಾಕಿರುವ ಜಾಗದಲ್ಲಿ ನಾಪತ್ತೆಯಾಗಿದ್ದ ತನ್ನ ಮಗಳ ಶವ ಕೂಡ ಇದ್ದಿರಬಹುದು. ಆದರೆ ತನಿಖೆಯನ್ನು ಕಾನೂನಾತ್ಮಕಾಗಿ ನಡೆಸುತ್ತಿಲ್ಲ ಎಂದು ಸುಜಾತಾ ಭಟ್ ಅವರು ಅಳಲು ತೋಡಿಕೊಂಡಿದ್ದಾರೆ.












