ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಇವರ ನೇತೃತ್ವದಲ್ಲಿ ಜು.20ರಂದು 7ನೇ ವರ್ಷದ “ಕೇಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮವು ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮುಂಭಾಗದ ಗದ್ದೆಯಲ್ಲಿ ಸಮಯ ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕೊಂಡಾಡಿ ಅಧ್ಯಕ್ಷರು, ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ, ಭಜನೆಕಟ್ಟೆ, ಇವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುರೇಶ್ ಶೆಟ್ಟಿ ಗುರ್ಮೆ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ, ನಿತೀಶ್ ಕುಮಾರ್ ಶೆಟ್ಟಿ ನಡಿಮನೆ ಅಧ್ಯಕ್ಷರು, ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ, ಭಜನೆಕಟ್ಟೆ, ಶ್ರೀಮತಿ ಜಯಂತಿ ಶೆಟ್ಟಿ ಅಧ್ಯಕ್ಷರು, ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶೇಖರ್ ಶೆಟ್ಟಿ, ಹಿರಿಯಡಕ ಗೌರವಾಧ್ಯಕ್ಷರು, ಹಿಂದೂ ಯುವ ಸೇವೆ ಉಡುಪಿ ಜಿಲ್ಲೆ, ವಿಠಲ್ ನಾಯಕ್, ಮೈರೆ ಕೃಷಿಕರು, ಲಕ್ಷಣ ಆಚಾರ್ಯ, ಕೊಂಡಾಡಿ ಜಾಗದ ವಾರಸುದಾರರು ಇವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕೊಂಡಾಡಿ ಅಧ್ಯಕ್ಷರು, ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ, ಭಜನೆಕಟ್ಟೆ ಇರಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉದಯಕುಮಾರ್ ಶೆಟ್ಟಿ, ಶಡಂಗರಬೆಟ್ಟು ಅಧ್ಯಕ್ಷರು, ಬೊಮ್ಮಾರಬೆಟ್ಟು ಬಿಜೆಪಿ ಗ್ರಾಮ ಸಮಿತಿ, ಅನಂತಯ್ಯ ಆಚಾರ್ಯ, ಕೊಂಡಾಡಿ ಗೌರವ ಸಲಹೆಗಾರರು, ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ದಿನೇಶ್ ಮೆಂಡನ್ ಕೋಡ್ಲ ಸದಸ್ಯರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಸುದರ್ಶನ್ ಪೆಲತ್ತೂರು ಇವರು ಪಾಲ್ಗೊಳ್ಳಲಿದ್ದಾರೆ.
ಯಶವಂತ್ ಎಂಜಿ ಗಾಯನಕ್ಕೆ ಜೊತೆಯಾಗಿ 24 ಗಂಟೆಗಳ ಕಾಲ ತಬಲ ನುಡಿಸುವುದರ ಮೂಲಕ ವಿಶ್ವದಾಖಲೆ ಬರೆದ ಉಡುಪಿ ಬನ್ನಂಜೆಯ ಪ್ರಜ್ವಲ್ ಆಚಾರ್ಯ ಇವರನ್ನು ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇವರು ಸನ್ಮಾನಿಸಲಿದ್ದಾರೆ.












