ಮಣಿಪಾಲ: ಸೆಕ್ಯುರಿಟಿ ಗಾರ್ಡ್ ನಿಂದ ವೇಶ್ಯಾವಾಟಿಕೆ ದಂದೆ; ಯುವತಿಯ ರಕ್ಷಣೆ

ಉಡುಪಿ: ಮಣಿಪಾಲ ಪೋಲಿಸ್ ಠಾಣೆಯ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಅಪಾರ್ಟ್​​ಮೆಂಟ್ ಸೆಕ್ಯೂರಿಟಿ ಗಾರ್ಡ್ ವೈಶ್ಯವಾಟಿಕೆ ದಂದೆಗೆ ಕೈ ಹಾಕಿ ಪೋಲಿಸರ ಅತಿಥಿಯಾಗಿದ್ದಾನೆ. ಅಪಾರ್ಟ್​​ಮೆಂಟ್ ಮನೆಯ ಮಾಲೀಕರು ಮನೆಯ ಬೀಗವನ್ನು ಸೆಕ್ಯೂರಿಟಿ ಗಾರ್ಡ್ ಬಳಿ ಕೊಟ್ಟು ಹೊರಗೆ ಹೋದಾಗ , ಚಾಲಾಕಿ ಸೆಕ್ಯೂರಿಟಿ ಗಾರ್ಡ್ ಮನೆಯ ಕೀಯನ್ನ ಬಳಸಿಕೊಂಡು ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ್ದಾನೆ.

ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದ ಮಂದಿಗೆ ಮನೆಯ ಕೀ ಯನ್ನ ಒಂದು ಸಾವಿರ ರೂಪಾಯಿಗಳಿಗೆ ನೀಡ್ತಿದ್ದ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಸದ್ಯ ಓರ್ವ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಇನ್ನೊಬ್ಬನಿಗೆ ಪೋಲಿಸರು ಬಲೆ ಬಿಸಿದ್ದಾರೆ.